ಚಾಮರಾಜನಗರ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಯುಕ್ತವಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ಆಯೋಜಿಸಿದ್ದ ಗಿರಿಜನ ಉತ್ಸವದಲ್ಲಿ ಶಾಸಕ ಎನ್ ಮಹೇಶ್ ಅವರು ಕಾಡಿನ ಮಕ್ಕಳೊಂದಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.
ಗಿರಿಜನ ಉತ್ಸವ: ಗೊರುಕನ ನೃತ್ಯ, ಕಂಸಾಳೆಗೆ ಶಾಸಕ ಮಹೇಶ್ ಕುಣಿತ! - ಗಡಿಜಿಲ್ಲೆಯಲ್ಲಿ ಗಿರಿಜನ ಉತ್ಸವ
ಬೆಟ್ಟದ ಗಂಗಾಧರೇಶ್ವರ ದೇಗುಲ ಮುಂಭಾಗದಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಶಾಸಕ ಎನ್ ಮಹೇಶ್ ಚಾಲನೆ ನೀಡಿ ಗಿರಿಜನರ ಗೊರುಕನ ನೃತ್ಯಕ್ಕೆ ಹೆಜ್ಜೆ ಹಾಕಿ ಕಲಾವಿದರ ಉತ್ಸಾಹ ಇಮ್ಮಡಿಗೊಳಿಸಿದರು.
![ಗಿರಿಜನ ಉತ್ಸವ: ಗೊರುಕನ ನೃತ್ಯ, ಕಂಸಾಳೆಗೆ ಶಾಸಕ ಮಹೇಶ್ ಕುಣಿತ! Tribal Festival](https://etvbharatimages.akamaized.net/etvbharat/prod-images/768-512-6069314-thumbnail-3x2-cnrjpg.jpg)
ಗಡಿಜಿಲ್ಲೆಯಲ್ಲಿ ಗಿರಿಜನ ಉತ್ಸವ
ಬೆಟ್ಟದ ಗಂಗಾಧರೇಶ್ವರ ದೇಗುಲ ಮುಂಭಾಗದಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಶಾಸಕರು ಚಾಲನೆ ನೀಡಿ ಗಿರಿಜನರ ಗೊರುಕನ ನೃತ್ಯಕ್ಕೆ ಹೆಜ್ಜೆ ಹಾಕಿದರು. ಈ ಮೂಲಕ ಕಲಾವಿದರ ಉತ್ಸಾಹ ಇಮ್ಮಡಿಗೊಳಿಸಿದರು.
ಗಡಿಜಿಲ್ಲೆಯಲ್ಲಿ ಗಿರಿಜನ ಉತ್ಸವ
ಗೊರುಕನ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಕಂಸಾಳೆ ಕಲಾವಿದರು ಕಂಸಾಳೆ ಹಿಡಿದು ಅವರೊಂದಿಗೂ ಹೆಜ್ಜೆ ಹಾಕಿದರು. ಇಂದು ಸಂಜೆವರೆಗೂ ವಿವಿಧ ಕಲಾತಂಡಗಳು ಗಿರಿಜನರ ಸಾಂಪ್ರದಾಯಿಕ ಹಾಡು - ನೃತ್ಯಗಳನ್ನು ಪ್ರಸ್ತುತಪಡಿಸಲಿದ್ದಾರೆ. ಈ ಬಾರಿ ವಿಜಿಕೆಕೆಯಲ್ಲಿರುವ ವಿದೇಶಿಗರು ಈ ಉತ್ಸವದಲ್ಲಿ ಪಾಲ್ಗೊಂಡಿರುವುದು ವಿಶೇಷ.