ಚಾಮರಾಜನಗರ :6ನೇ ವೇತನ ಜಾರಿಗೆ ಒತ್ತಾಯಿಸಿ ಮಾಡುತ್ತಿರುವ ಮುಷ್ಕರ ಯಶಸ್ವಿಯಾಗಿ ನಡೆಯುತ್ತಿದೆ. ಸೋಮವಾರದಿಂದ ಬೀದಿಗಿಳಿಯುತ್ತೇವೆ ಎಂದು ಸಾರಿಗೆ ನೌಕರರ ಕೂಟದ ಸದಸ್ಯ ಹಾಗೂ ಕೆಎಸ್ಆರ್ಟಿಸಿ ನಿರ್ವಾಹಕ ರಾಜೇಶ್ ಹೇಳಿದರು.
'ನಾಳೆಯಿಂದ ಬೀದಿಗಿಳಿಯುತ್ತೇವೆ, ಕೊರೊನಾಗೆ ತುತ್ತಾದರೆ ಸರ್ಕಾರವೇ ಹೊಣೆ' - ಚಾಮರಾಜನಗರ ಲೇಟೆಸ್ಟ್ ನ್ಯೂಸ್
ನಮ್ಮ ಹೋರಾಟಕ್ಕೆ ಕುಟುಂಬ ಸದಸ್ಯರನ್ನು ಕರೆ ತರಲಿದ್ದೇವೆ. ಕೊರೊನಾಗೆ ತುತ್ತಾದರೆ ಅಥಾವ ಇನ್ನಿತರೆ ಅನಾಹುತಗಳಾದರೆ ಸರ್ಕಾರವೇ ನೇರ ಹೊಣೆಯಾಗಲಿದೆ. ನಮ್ಮ ಹೋರಾಟಕ್ಕೆ ರೈತ, ದಲಿತಪರ ಸಂಘಟನೆಗಳು ಬೆಂಬಲ ನೀಡಿವೆ. ನಾಳೆಯ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ..
press meet
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಮಾತಿಗೆ ತಪ್ಪಿದ್ದರಿಂದ ಹೋರಾಟ ಅನಿವಾರ್ಯ. ಈಗ ಹೋರಾಗಾರರ ಮೇಲೆ ದಬ್ಬಾಳಿಕೆ ನಡೆಸಿ ಹತ್ತಿಕ್ಕುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸೋಮವಾರದಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ನಮ್ಮ ಹೋರಾಟಕ್ಕೆ ಕುಟುಂಬ ಸದಸ್ಯರನ್ನು ಕರೆ ತರಲಿದ್ದೇವೆ. ಕೊರೊನಾಗೆ ತುತ್ತಾದರೆ ಅಥಾವ ಇನ್ನಿತರೆ ಅನಾಹುತಗಳಾದರೆ ಸರ್ಕಾರವೇ ನೇರ ಹೊಣೆಯಾಗಲಿದೆ. ನಮ್ಮ ಹೋರಾಟಕ್ಕೆ ರೈತ, ದಲಿತಪರ ಸಂಘಟನೆಗಳು ಬೆಂಬಲ ನೀಡಿವೆ. ನಾಳೆಯ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ ಎಂದರು.