ಕರ್ನಾಟಕ

karnataka

ETV Bharat / state

ಹೆಂಡತಿ - ಮಕ್ಕಳೊಂದಿಗೆ ತಟ್ಟೆ ಲೋಟ ಹಿಡಿದು ಸಾರಿಗೆ ನೌಕರರ ಪ್ರತಿಭಟನೆ! - protest in Chamrajnagar

ಸಾರಿಗೆ ನೌಕರರ ಹೋರಾಟಕ್ಕೆ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು, ದಲಿತ ಪರ ಹೋರಾಟಗಾರರು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಕಿಡಿಕಾರಿದರು.

Transport  employees protest
ಹೆಂಡತಿ-ಮಕ್ಕಳೊಂದಿಗೆ ತಟ್ಟೆ ಲೋಟ ಹಿಡಿದು ಸಾರಿಗೆ ನೌಕರರ ಪ್ರತಿಭಟನೆ

By

Published : Apr 12, 2021, 4:53 PM IST

ಚಾಮರಾಜನಗರ: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಇಂದು ಸಾರಿಗೆ ಸಂಸ್ಥೆಯ 50ಕ್ಕೂ ಹೆಚ್ಚು ಸಿಬ್ಬಂದಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಂಡತಿ-ಮಕ್ಕಳೊಂದಿಗೆ ತಟ್ಟೆ ಲೋಟ ಹಿಡಿದು ಸಾರಿಗೆ ನೌಕರರ ಪ್ರತಿಭಟನೆ

ಹೆಂಡತಿ - ಮಕ್ಕಳೊಂದಿಗೆ ಖಾಲಿ ತಟ್ಟೆ - ಲೋಟ ಹಿಡಿದು ಬಂದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೋರಾಟ ಹತ್ತಿಕ್ಕುವ ಬದಲು ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಿ. ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ನೌಕರರ ಹೋರಾಟಕ್ಕೆ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು, ದಲಿತ ಪರ ಹೋರಾಟಗಾರರು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಕಿಡಿಕಾರಿದರು.

100ಕ್ಕೂ ಹೆಚ್ಚು ಸಾರಿಗೆ ಸಂಸ್ಥೆ ಬಸ್​ಗಳು ಇಂದು ಸಂಚಾರ ಆರಂಭಿಸಿದ್ದು, ಮಂಗಳವಾರದಿಂದ ಗ್ರಾಮಾಂತರ ವಿಭಾಗಕ್ಕೂ ಸೇವೆ ವಿಸ್ತರಣೆಯಾಗಲಿದೆ. ಈಗಾಗಲೇ 25 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಕೆಎಸ್​ಆರ್​ಟಿಸಿ ಡಿಸಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ABOUT THE AUTHOR

...view details