ಚಾಮರಾಜನಗರ:ಕಳೆದ ಕೆಲ ದಿನಗಳಿಂದ ಅಧಿಕಾರಶಾಹಿ ಹಾಗೂ ರಾಜಕೀಯ ಪಡಸಾಲೆಯಲ್ಲಿ ವರ್ಗಾವಣೆ ಮತ್ತು ಸ್ಥಾನ ಬದಲಾವಣೆ ಚರ್ಚೆ ನಡೆಯುತ್ತಿದೆ. ಡಿಸಿ ಹಾಗೂ ಎಸ್ಪಿ ವರ್ಗಾವಣೆ ಆಗಲಿದ್ದಾರೆ ಎನ್ನಲಾಗುತ್ತಿದೆ.
ಚಾಮರಾಜನಗರ ಜಿಲ್ಲೆ ಮೇಲೆ ವಿ ಸೋಮಣ್ಣ ಕಣ್ಣು.. ಉಸ್ತುವಾರಿ ಸಚಿವ, ಡಿಸಿ, ಎಸ್ಪಿ ಬದಲಾಗುವರೇ!? - Suresh Kumar
ಮೂರುವರೆ ತಿಂಗಳಿನ ಹಿಂದೆಯಷ್ಟೇ ಚಾಮರಾಜನಗರ ಉಸ್ತುವಾರಿ ಸಚಿವರಾಗಿ ನೇಮಕವಾಜ ಸುರೇಶ್‌ಕುಮಾರ್ ಅವರ ಸ್ಥಾನವೂ ಪಲ್ಲಟವಾಗಲಿದೆ ಎನ್ನಲಾಗ್ತಿದೆ. ವಸತಿ ಸಚಿವ ವಿ.ಸೋಮಣ್ಣ ಗಡಿಜಿಲ್ಲೆ ಉಸ್ತುವಾರಿ ವಹಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರಂತೆ.
ಜಿಲ್ಲಾಧಿಕಾರಿಯಾಗಿರುವ ಬಿ ಬಿ ಕಾವೇರಿ ಸ್ಥಾನಕ್ಕೆ ಖಾದಿ ಮತ್ತು ಕೈಮಗ್ಗ ಇಲಾಖೆಯ ಆಯುಕ್ತ ಡಾ.ಎಂ ಆರ್ ರವಿ ಅವರು ವರ್ಗಾವಣೆಯಾಗುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ಜಿಲ್ಲೆಗೆ ಬಂದು 6-7 ತಿಂಗಳಿಗೇ ಅವರನ್ನು ಎತ್ತಂಗಡಿ ಮಾಡುವ ಮಾತು ಕೇಳಿ ಬರುತ್ತಿದೆ. ಇವರ ಜಾಗಕ್ಕೆ ಅಭಿನವ್ ಖರೆ ಬರಬಹುದು ಎನ್ನಲಾಗುತ್ತಿದೆ.
ಮೂರುವರೆ ತಿಂಗಳ ಹಿಂದಷ್ಟೇ ಚಾಮರಾಜನಗರ ಉಸ್ತುವಾರಿ ಸಚಿವರಾಗಿ ನೇಮಕವಾದ ಸುರೇಶ್‌ಕುಮಾರ್ ಅವರ ಸ್ಥಾನವೂ ಪಲ್ಲಟವಾಗಲಿದೆಯಂತೆ. ವಸತಿ ಸಚಿವ ವಿ.ಸೋಮಣ್ಣ ಗಡಿಜಿಲ್ಲೆ ಉಸ್ತುವಾರಿಯಾಗಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದು ಎಷ್ಟರಮಟ್ಟಿಗೆ ನಿಜ ನೋಡಬೇಕು.