ಕರ್ನಾಟಕ

karnataka

ETV Bharat / state

ಚಾಮರಾಜನಗರ ಎಡಿಸಿ ವರ್ಗಾವಣೆ; ಮಾದಪ್ಪನ‌ ಬೆಟ್ಟದ ಕಾರ್ಯದರ್ಶಿ ಎತ್ತಂಗಡಿ - ಹಾಸನ‌ ಎಡಿಸಿ ನೇಮಕ

ಚಾಮರಾಜನಗರ ಎಡಿಸಿ ಕಾತ್ಯಾಯಿಣಿ ದೇವಿ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಹಾಸನದ ಎಡಿಸಿ ಕವಿತಾ ರಾಜಾರಾಂ ಅವರನ್ನು ನೇಮಿಸಲಾಗಿದೆ ಹಾಗೇ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜವಾಬ್ದಾರಿಯನ್ನು ನೀಡಲಾಗಿದೆ.

Transfer of Chamarajanagar ADC and Male Mahadeshwara Hills Secretary of the Development Authority
ಚಾಮರಾಜನಗರ ಎಡಿಸಿ ವರ್ಗಾವಣೆ

By

Published : May 22, 2022, 3:56 PM IST

ಚಾಮರಾಜನಗರ: ಎಡಿಸಿ ಆಗಿದ್ದ ಕಾತ್ಯಾಯಿಣಿ ದೇವಿ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಹಾಸನ‌ ಎಡಿಸಿಯಾಗಿದ್ದ ಕವಿತಾ ರಾಜಾರಾಂ ಅವರನ್ನು ನೇಮಕ ಮಾಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಈ ಆದೇಶವನ್ನು ಹೊರಡಿಸಿದ್ದು, ವರ್ಗಾವಣೆಯಾದ ಕಾತ್ಯಾಯಿಣಿ ದೇವಿ ಅವರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ. ಕವಿತಾ ರಾಜಾರಾಂ ಅವರು ಈ‌ ಕೂಡಲೇ ಆಡಳಿತಾತ್ಮಕ ದೃಷ್ಟಿಯಿಂದ ಅಧಿಕಾರ ವಹಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಕಾತ್ಯಾಯಿಣಿ ದೇವಿ ಅವರು ಕಳೆದ ಒಂದು ವರ್ಷಗಳಿಂದ ಉತ್ತಮವಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಜನಪ್ರಿಯತೆಯನ್ನು ಗಳಿಸಿದ್ದರು. ಮತ್ತೊಂದೆಡೆ ನೂತನ‌ ಎಡಿಸಿ ಅವರಿಗೆ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜವಾಬ್ದಾರಿ ನೀಡುವ ಮೂಲಕ ಜಯವಿಭವಸ್ವಾಮಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ಜಯವಿಭವಸ್ವಾಮಿ ಇನ್ಮುಂದೆ ಸೆಸ್ಕ್ ಎಂಡಿಯಾಗಿ ಮುಂದುವರೆಯಲಿದ್ದಾರೆ.

ಇದನ್ನೂ ಓದಿ:ಮಳೆ ನಿಂತ ಬಳಿಕ ಡೋಣಿ ನದಿಯಲ್ಲಿ ಹೆಚ್ಚಿದ ನೀರಿನ ಹರಿವು.. ಹೆದ್ದಾರಿ ಬಂದ್​ ಸಾಧ್ಯತೆ

ABOUT THE AUTHOR

...view details