ಕೊಳ್ಳೇಗಾಲ:ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಮೈಸೂರು ತಿಲಕ್‌ನಗರ ನಿವಾಸಿ ಬೈಕ್ ಸವಾರ ಸುಮಂತ್(23) ಸಾವನ್ನಪ್ಪಿದ ಯುವಕ. ಮತ್ತೊಬ್ಬ ಸವಾರ ಕುವೆಂಪು ನಗರ ನಿವಾಸಿ ಅಜಿತ್(27) ಎಂಬುವವರು ಗಾಯಗೊಂಡಿದ್ದಾರೆ.
ಇವರು ಮಲೈಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಮೈಸೂರಿನಿಂದ ತಮ್ಮ ಬೈಕ್ ನಲ್ಲಿ ಬರುತ್ತಿರುವಾಗ ತಾಲೂಕಿನ ಉತ್ತಂಬಳ್ಳಿ ಗ್ರಾಮದ ಬಳಿ
ಜೆಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರರು ತೀವ್ರ ಗಾಯಗೊಂಡಿದ್ದರು.