ಕರ್ನಾಟಕ

karnataka

ETV Bharat / state

ಪ್ರವಾಸಿಗರೇ ಗಮನಿಸಿ.. ಹೊಗೆನಕಲ್ ಜಲಪಾತಕ್ಕಿಲ್ಲ ಪ್ರವೇಶ

ಹೊಗೆನಕಲ್ ಜಲಪಾತವನ್ನ ಪ್ರವಾಸಿಗರಿಗೆ ಮುಕ್ತ ಮಾಡಲು ಯಾವುದೇ ಆದೇಶ ಇದುವರೆಗೂ ಬಂದಿಲ್ಲವಾದ್ದರಿಂದ ಜಲಪಾತ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರೆಸಿಲಾಗಿದೆ ಎಂದು ಕಾವೇರಿ ವನ್ಯಜೀವಿ ಧಾಮದ ಡಿಎಫ್ಒ ಡಾ.ರಮೇಶ್ ತಿಳಿಸಿದ್ದಾರೆ.

Tourists are not allowed access to the Hogenakkal Falls
ಪ್ರವಾಸಿಗರೇ ಗಮನಿಸಿ..ಹೊಗೆನಕಲ್ ಜಲಪಾತಕ್ಕಿಲ್ಲ ಪ್ರವೇಶ

By

Published : Jun 7, 2020, 9:47 PM IST

ಚಾಮರಾಜನಗರ:ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ನಿರ್ಬಂಧ ಮುಂದುವರೆಸಲಾಗಿದೆ.

ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಕಾವೇರಿ ವನ್ಯಜೀವಿ ಧಾಮದ ಡಿಎಫ್ಒ ಡಾ.ರಮೇಶ್, ಹೊಗೆನಕಲ್ ಜಲಪಾತವನ್ನ ಪ್ರವಾಸಿಗರಿಗೆ ಮುಕ್ತ ಮಾಡಲು ಯಾವುದೇ ಆದೇಶ ಇದುವರೆಗೂ ಬಂದಿಲ್ಲವಾದ್ದರಿಂದ ಜಲಪಾತ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರೆಸಿಲಾಗಿದೆ ಎಂದು ತಿಳಿಸಿದ್ದಾರೆ. ಹೊಗೆನಕಲ್ ಜಲಪಾತ ಪ್ರದೇಶ ತಮಿಳುನಾಡು ಹಾಗೂ ಕರ್ನಾಟಕ ಎರಡೂ ರಾಜ್ಯಕ್ಕೂ ಒಳಪಟ್ಟಿದ್ದು, ಎರಡೂ ರಾಜ್ಯಗಳ ಪ್ರವಾಸಿಗರು ಬರುವುದರಿಂದ ಸ್ಥಳೀಯರಲ್ಲೂ ಕೊರೊನಾ ಆತಂಕ ಮೂಡಿದೆ.

ಸದ್ಯಕ್ಕೆ, ಜಲಪಾತವನ್ನು ಪ್ರವಾಸಿಗರಿಗೆ ಮುಕ್ತ ಮಾಡದೇ ಇರುವುದೇ ಒಳ್ಳೆಯದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರವಾಸಿಗರಿಗೆ ಮುಕ್ತ ಮಾಡಿದರೆ ತೆಪ್ಪ ನಂಬಿಕೊಂಡು ಜೀವನ ಸಾಗಿಸುವವರ ಬದುಕು ಸಾಗುತ್ತದೆ ಎಂದಿದ್ದಾರೆ.

ABOUT THE AUTHOR

...view details