ಚಾಮರಾಜನಗರ:ಬಿಳಿಗಿರಿರಂಗನ ಬೆಟ್ಟಕ್ಕೆ ಸಾಗುವ ಕಾಡಿನಲ್ಲಿ ಇಳಿದು ಫೋಟೋ ತೆಗೆದರೆ ದಂಡ ವಿಧಿಸುವ ಎಚ್ಚರಿಕೆ ಮಧ್ಯೆಯೂ ಪ್ರವಾಸಿಗರು ಇಲ್ಲಿ ಹರಿಯುವ ನೀರಿನಲ್ಲಿ ಸ್ನಾನ ಮಾಡಿ, ಮೋಜು ಮಾಡುತ್ತಿರುವುದು ಕಂಡು ಬಂದಿದೆ.
ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುವ ಹಾದಿಯಲ್ಲಿ ಚೆಕ್‍ಪೋಸ್ಟ್‌ನಿಂದ 4-5 ಕಿಮೀ ದೂರದಲ್ಲಿರುವ ಝರಿಯಲ್ಲಿ ಟೆಂಪೋ ಟ್ರಾವೆಲ್ ನಿಲ್ಲಿಸಿ ಪ್ರವಾಸಿಗರು ಸ್ನಾನ ಮಾಡಿ, ಸಿಗರೇಟ್ ಸೇದುತ್ತಾ ನಿಂತಿರುವುದನ್ನು ದಾರಿಹೋಕರೊಬ್ಬರು ಸೆರೆಹಿಡಿದಿದ್ದಾರೆ.