ಚಾಮರಾಜನಗರದಲ್ಲಿ ಕೊರೊನಾ ಹೈಸ್ಪೀಡ್ ಓಟ... 30 ಹೊಸ ಕೋವಿಡ್ ಕೇಸ್ ಪತ್ತೆ - ಚಾಮರಾಜನಗರದಲ್ಲಿ ಕೋವಿಡ್ ಕೇಸ್
ಚಾಮರಾಜನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಏಕಾಏಕಿ 30 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಮಾಸ್ಕ್ ಧರಿಸದೇ ಜನರು ಮತ್ತದೇ ಅಸಡ್ಡೆ ತೋರುತ್ತಿರುವುದು ಕಳವಳ ಹುಟ್ಟಿಸಿದೆ.
ಚಾಮರಾಜನಗರ:ದಿಡೀರನೇ ಜಿಲ್ಲೆಯಲ್ಲಿ ಕೊರೊನಾ ಏರುಗತಿ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಏಕಾಏಕಿ 30 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ 4 ಮಂದಿಯಷ್ಟೇ ಬಿಡುಗಡೆಯಾಗಿದ್ದು ಸದ್ಯ ಹೋಂ ಐಸೋಲೇಷನ್ನಲ್ಲಿ 59 ಮಂದಿ, ಮೂವರು ಐಸಿಯುನಲ್ಲಿದ್ದಾರೆ. 390 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಈ ಹಿಂದಿನ ಅವಧಿಯಲ್ಲಿ 15 ಹೊಸ ಕೇಸ್ ಪತ್ತೆಯಾಗಿದ್ದರೇ ಇಂದು ಅದು 30 ಆಗಿದೆ. ಮಾಸ್ಕ್ ಧರಿಸದೇ ಜನರು ಮತ್ತದೇ ಅಸಡ್ಡೆ ತೋರುತ್ತಿರುವುದು ಕಳವಳ ಹುಟ್ಟಿಸಿದೆ.