ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಏರುಗತಿ ಕಾಣುತ್ತಿದ್ದು, ಇಂದು ಏಕಾಏಕಿ 42 ಹೊಸ ಕೇಸ್ ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದಲ್ಲಿ ಹೆಚ್ಚಿದ ಕೊರೊನಾ: 142ಕ್ಕೇರಿದ ಸಕ್ರಿಯ ಪ್ರಕರಣಗಳ ಸಂಖ್ಯೆ - ಕೊರೊನಾ ಸುದ್ದಿ
ಇಂದು 4 ಮಂದಿಯಷ್ಟೇ ಬಿಡುಗಡೆಯಾಗಿದ್ದು, ಸದ್ಯ ಹೋಂ ಐಸೋಲೇಷನ್ನಲ್ಲಿ 81 ಮಂದಿ, ಐವರು ಐಸಿಯುನಲ್ಲಿದ್ದಾರೆ.
![ಚಾಮರಾಜನಗರದಲ್ಲಿ ಹೆಚ್ಚಿದ ಕೊರೊನಾ: 142ಕ್ಕೇರಿದ ಸಕ್ರಿಯ ಪ್ರಕರಣಗಳ ಸಂಖ್ಯೆ Corona](https://etvbharatimages.akamaized.net/etvbharat/prod-images/768-512-08:38:04:1617808084-kn-cnr-06-covid-av-ka10038-07042021202111-0704f-1617807071-517.jpg)
Corona
ಇಂದು 4 ಮಂದಿಯಷ್ಟೇ ಬಿಡುಗಡೆಯಾಗಿದ್ದು, ಸದ್ಯ ಹೋಂ ಐಸೋಲೇಷನ್ ನಲ್ಲಿ 81 ಮಂದಿ, ಐವರು ಐಸಿಯುನಲ್ಲಿದ್ದಾರೆ. 546 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಇಂದು 1194 ಮಂದಿಗೆ ಕೋವಿಡ್ ಟೆಸ್ಟ್ ನಡೆಸಿದ್ದು, ಚಾಮರಾಜನಗರ ತಾಲೂಕು ಒಂದರಲ್ಲೇ 21 ಹೊಸ ಕೇಸ್ಗಳು ಪತ್ತೆಯಾಗಿವೆ.