ಅನ್ ಲೋಡ್ ಮಾಡುವಾಗ ಟಿಪ್ಪರ್ ಪಲ್ಟಿ: ಕಲ್ಲು ಕ್ವಾರಿಯಲ್ಲಿ ಕಾರ್ಮಿಕ ಸಾವು - ಕಲ್ಲುಕ್ವಾರಿಯಲ್ಲಿ ಅಪಘಾತ
ಟಿಪ್ಪರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಿಲ್ಲೆಯ ಸಂತೇಮರಹಳ್ಳಿಯ ಕರಿಕಲ್ಲು ಕ್ವಾರಿಯಲ್ಲಿ ಘಟನೆ ನಡೆದಿದೆ.
ಅನ್ ಲೋಡ್ ಮಾಡುವಾಗ ಟಿಪ್ಪರ್ ಪಲ್ಟಿ
ಚಾಮರಾಜನಗರ:ಅನ್ ಲೋಡ್ ಮಾಡುವಾಗ ಟಿಪ್ಪರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂತೇಮರಹಳ್ಳಿಯ ಕರಿಕಲ್ಲು ಕ್ವಾರಿಯೊಂದರಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಶಿವಕುಮಾರ್(32) ಮೃತ ದುರ್ದೈವಿ. ಕರಿಕಲ್ಲು ಸಾಮಗ್ರಿಗಳನ್ನು ಅನ್ ಲೋಡ್ ಮಾಡುವಾಗ ಟಿಪ್ಪರ್ ಪಲ್ಟಿಯಾಗಿ ಚಾಲಕ ಶಿವಕುಮಾರ್ ವಾಹನದ ಕೆಳಗೆ ಸಿಲುಕಿ ಮೃತಪಟ್ಟಿದ್ದಾನೆ.