ಕರ್ನಾಟಕ

karnataka

ETV Bharat / state

Watch - ತಾಯಿ ಹಿಂಬಾಲಿಸಿದ ಮರಿಗಳು.. ಕೆ.ಗುಡಿಯಲ್ಲಿ ಮೂರು ಹುಲಿ ಕಂಡ ಸಫಾರಿಗರು! - ಕೆ.ಗುಡಿಯಲ್ಲಿ ಹುಲಿಗಳ ದರ್ಶನ

ಬಿಳಿಗಿರಿ ರಂಗನಬೆಟ್ಟದ ಕೆ.ಗುಡಿಯಲ್ಲಿ ಮೂರು ಹುಲಿಗಳು ಪ್ರವಾಸಿಗರಿಗೆ ದರ್ಶನ ನೀಡಿದ್ದು, ಪ್ರವಾಸಿಗರು ಫುಲ್​ಖುಷ್ ಆಗಿದ್ದಾರೆ.

tigers in biligirirangana betta
ತಾಯಿ ಹಿಂಬಾಲಿಸಿದ ಎರಡು ಮರಿ ಹುಲಿಗಳು, ಕೆ.ಗುಡಿಯಲ್ಲಿ ಮೂರು ಹುಲಿಗಳನ್ನು ಕಂಡ ಸಫಾರಿಗರು

By

Published : Aug 31, 2021, 1:31 PM IST

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಕಾಣುವುದೇ ಅಪರೂಪ ಎಂಬ ಮಾತಿನ ನಡುವೆ ಮೂರು ಹುಲಿಗಳು ಪ್ರವಾಸಿಗರಿಗೆ ದರ್ಶನ ಕೊಟ್ಟು ಮುದ ನೀಡಿರುವ ಘಟನೆ ಕೆ.ಗುಡಿಯ ಆನೆಕೆರೆ ಎಂಬಲ್ಲಿ ಬೆಳಗ್ಗೆ ನಡೆದಿದೆ.

ಕೆ.ಗುಡಿಯ ಜಂಗಲ್ ಲಾಡ್ಜ್​ನಿಂದ ಬೆಳಗಿನ ಸಫಾರಿಗೆ ತೆರಳಿದ್ದ ಎರಡು ಜೀಪುಗಳಿಗೆ ಮೂರು ಹುಲಿ ಒಟ್ಟಾಗಿ ಹೆಜ್ಜೆ ಹಾಕಿ ಪ್ರವಾಸಿಗರನ್ನು ರೋಮಾಂಚನಗೊಳಿಸಿದ್ದು, ಈ ಅಪರೂಪದ ವಿಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದು 'ಈಟಿವಿ ಭಾರತ'ಕ್ಕೆ ನೀಡಿದ್ದಾರೆ.

ಬಿಳಿಗಿರಿರಂಗನಬೆಟ್ಟದ ಕೆ.ಗುಡಿಯಲ್ಲಿ ಮೂರು ಹುಲಿಗಳನ್ನು ಕಂಡ ಸಫಾರಿಗರು

ಬಂಡೀಪುರ, ನಾಗರಹೊಳೆಗೆ ಹೋಲಿಸಿದರೇ ಪ್ರವಾಸಿಗರಿಗೆ ಕೆ.ಗುಡಿಯಲ್ಲಿ ಹುಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಮೂರು ಹುಲಿಗಳನ್ನು ಕಂಡ ಸಫಾರಿಗರು ಸಖತ್ ಖುಷ್ ಆಗಿದ್ದಾರೆ.

ಹುಲಿ ನೀರು ಕುಡಿಯುವುದು, ಚಿನ್ನಾಟ ಆಡುವುದು ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರಂತೆ, ಕೆಲ ದಿನಗಳಿಂದ ಬಂಡೀಪುರದಲ್ಲಿ ಸುಂದರಿ ಎಂಬ ಹುಲಿಯು ಆಗಾಗ್ಗೆ ದರ್ಶನ ನೀಡುತ್ತಿದೆ.

ಇದನ್ನೂ ಓದಿ:ಕೇರಳದ ಕೋವಿಡ್ ಏರಿಕೆ ಬಿಸಿ.. ಬೆಂಗಳೂರಿಗೆ ನಗರಕ್ಕೆ ಕೆಲ ನಿರ್ಬಂಧಗಳ ಅಗತ್ಯವಿದೆ: ಗೌರವ್ ಗುಪ್ತಾ

ABOUT THE AUTHOR

...view details