ಕರ್ನಾಟಕ

karnataka

ETV Bharat / state

ರುದ್ರಾಕ್ಷಿಯೊಂದಿಗೆ ಹುಲಿ ಉಗುರು-ನರಿ ಹಲ್ಲು ಮಾರಾಟ: ಇಬ್ಬರ ಬಂಧನ - Chamarajanagar tiger nail and fox teeth sellers arrest

ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದ ಇಬ್ಬರು ವ್ಯಕ್ತಿಗಳು ಗುಂಡ್ಲುಪೇಟೆ ಪಟ್ಟಣ ಹಾಗೂ ಬೇಗೂರು ಭಾಗದಲ್ಲಿ ರುದ್ರಾಕ್ಷಿಯೊಂದಿಗೆ ಹುಲಿ ಉಗುರು ಮತ್ತು ನರಿ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಇಬ್ಬರು ಅಲೆಮಾರಿಗಳು ಅಂದರ್!

By

Published : Oct 31, 2019, 9:21 PM IST

ಚಾಮರಾಜನಗರ:ರುದ್ರಾಕ್ಷಿಯೊಂದಿಗೆ ಹುಲಿ ಉಗುರು ಮತ್ತು ನರಿ ಹಲ್ಲುಗಳನ್ನು ಮಾರಾಟ ಮಾಡುತ್ತಿದ್ದಅಲೆಮಾರಿ ಹಕ್ಕಿ ಪಿಕ್ಕಿ ಜನಾಂಗದ ಇಬ್ಬರನ್ನು ಗುಂಡ್ಲುಪೇಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿ ಗ್ರಾಮದ ಧವನ್ ಮತ್ತು ಗೋಕುಲ್ ಬಂಧಿತ ಆರೋಪಿಗಳು.

ಆರೋಪಿಗಳು ಗುಂಡ್ಲುಪೇಟೆ ಪಟ್ಟಣ ಹಾಗೂ ಬೇಗೂರು ಭಾಗದಲ್ಲಿಹುಲಿ ಉಗುರು ಮತ್ತು ನರಿ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗುಂಡ್ಲುಪೇಟೆ ಆರ್​ಎಫ್ಒ ಲೋಕೇಶ ಮತ್ತು ತಂಡ ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತರಿಂದ 6 ಹುಲಿ ಉಗುರು, 7 ನರಿ ಹಲ್ಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

For All Latest Updates

TAGGED:

ABOUT THE AUTHOR

...view details