ಚಾಮರಾಜನಗರ:ಇದೇ ಮೊದಲ ಬಾರಿಗೆ ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಗ್ರಾಮದಲ್ಲಿ ಹುಲಿ ದಾಳಿಗೆ ಮೂರು ಹಸುಗಳು ಬಲಿಯಾಗಿವೆ.
ಗ್ರಾಮದ ರಾಜೇಂದ್ರ ಎಂಬುವರಿಗೆ ಸೇರಿದ ಹಸುಗಳು ಬಲಿಯಾಗಿದ್ದು, ಬೆಲೆಬಾಳುವ ಹಸುಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದಾರೆ. ಮೇಲ್ನೋಟಕ್ಕೆ ಹುಲಿ ದಾಳಿಯಿಂದಲೇ ಹಸುಗಳು ಮೃತಪಟ್ಟಿವೆ ಎಂದು ಕಂಡುಬಂದಿದ್ದು ಚಿರತೆ ದಾಳಿಯನ್ನೂ ಅಲ್ಲಗಳೆಯುವಂತಿಲ್ಲ.
ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುಗಳ ಮೇಲೆ ದಾಳಿ ಮಾಡಿ ಕೊಂದಿದ್ದು ಒಂದು ಹಸುವಿನ ದೇಹದ ಅರ್ಧಭಾಗವನ್ನು ತಿಂದುಹಾಕಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನಿನಲ್ಲಿ ಈ ಘಟನೆ ನಡೆದಿದ್ದು ಅರಣ್ಯಾಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ.
ಇನ್ನು, ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಾಡಿನತ್ತ ಕಾಡುಪ್ರಾಣಿಗಳು ಲಗ್ಗೆ ಇಡುತ್ತಿವೆ. ಅಧಿಕಾರಿಗಳು ಜವಾಬ್ದಾರಿ ಪ್ರದರ್ಶಿಸಿದರೆ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಯಬಹುದು. ಆ ಕೆಲಸ ಆಗುತ್ತಿಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ: ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹರಿದ ಕಾರು : ತಾಯಿ - ಮಗು ಸಾವು