ಚಾಮರಾಜನಗರ:ಕಳೆದ 10 ದಿನಗಳಿಂದ 50 ಸಿಬ್ಬಂದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ.ಎಸ್. ಬೆಟ್ಟ ಮತ್ತು ಕುಂದಕೆರೆ ವಲಯದಲ್ಲಿ ಕಾರ್ಯಾಚರಣೆ ನಡೆಸಿದರೂ ನರಭಕ್ಷಕ ಹುಲಿಯ ಸುಳಿವು ಸಿಕ್ಕಿಲ್ಲ.
ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಎಂಬವರನ್ನು ತಿಂದು ಹಾಕಿರುವ ಹುಲಿರಾಯ ಡ್ರೋಣ್ ಕ್ಯಾಮರಾಗೂ ಕಣ್ಣಿಗೂ ಬೀಳದೆ, ಅಭಿಮನ್ಯು, ಪಾರ್ಥಸಾರಥಿ ಮತ್ತು ಪಾರ್ಥ ಎಂಬ ಆನೆಗಳ ಕಣ್ಣಿಗೂ ಕಾಣದೇ ಅರಣ್ಯ ಇಲಾಖೆಯನ್ನು ಪೇಚಿಗೆ ಸಿಲುಕಿಸಿದೆ.