ಚಾಮರಾಜನಗರ: ಕಾಡೆಮ್ಮೆಯೊಂದನ್ನು ಬೇಟೆಯಾಡಿ ತಿಂದ ಹುಲಿಯೊಂದು ಪಕ್ಕದಲ್ಲೇ ಇದ್ದ ಕೆರೆಯಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದ ಸುಂದರ ಕ್ಷಣಗಳು ಬಂಡೀಪುರದಲ್ಲಿ ಕಂಡು ಬಂದಿದೆ.
ಬಂಡೀಪುರ ಸಫಾರಿ ಜೋನ್ನ ಬಸವನಕಟ್ಟೆ ಎಂಬಲ್ಲಿ ಹುಲಿಯೊಂದು ಬೇಟೆಯಾಡಿದ್ದ ಕಾಡೆಮ್ಮೆಯನ್ನು ತಿಂದ ನಂತರ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಕಾಲು ಚಾಚಿಕೊಂಡು ರಿಲ್ಯಾಕ್ಸ್ ಮಾಡುತ್ತಿದ್ದನ್ನು ಜಂಗಲ್ ಲಾಡ್ಜ್ ಹಾಗೂ ಬಂಡೀಪುರ ಸಫಾರಿ ಕೇಂದ್ರದಿಂದ ತೆರಳಿದ್ದ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.