ಚಾಮರಾಜನಗರ:ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಪ್ರವಾಸಿಗರ ಮತ್ತು ಭಕ್ತರ ಕಣ್ಣಿಗೆ ಕಾಣಿಸಿಕೊಂಡಿದೆ. ಬಹಳ ದಿನಗಳ ಬಳಿಕ ಹುಲಿ ದರ್ಶನ ನೀಡಿದೆ. ಇದರಿಂದ ಬೆಟ್ಟಕ್ಕೆ ತೆರಳಿದವರು ರೋಮಾಂಚನಗೊಂಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಮೂಲಕ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಸಂಜೆ 4.30ಕ್ಕೆ ಹಿಂತಿರುಗುವಾಗ ದೊಡ್ಡ ತಿರುವಿನ ಬಳಿ ಹುಲಿ ಕಂಡಿದೆ. ಗುಡ್ಡದ ಮೇಲೆ ಕುಳಿತು ಹುಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದನ್ನು ಭಕ್ತರು, ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಭರ್ಜರಿ ಬೇಟೆ ತಿಂದುಂಡು ದಣಿವಾರಿಸಿಕೊಳ್ಳುವ ಭಂಗಿಯಲ್ಲಿ ಹುಲಿ ಕುಳಿತಿತ್ತು.