ಕರ್ನಾಟಕ

karnataka

ETV Bharat / state

ಚಿರತೆ ಬಳಿಕ ಚಾಮರಾಜನಗರದ ಅರಕಲವಾಡಿಯಲ್ಲಿ ಹುಲಿ ಭೀತಿ! - Arakalavady latest news

ಇಷ್ಟು ದಿನ ಚಿರತೆ ಮಾತ್ರ ನೋಡುತ್ತಿದ್ದೆವು. ಈಗ ಹುಲಿಯೂ ಪ್ರತ್ಯಕ್ಷವಾಗಿರುವುದು ಭಯ ಮತ್ತು ಅಚ್ಚರಿಯಾಗಿದೆ. ಬೆಳೆ ಕಾಯಲು ರಾತ್ರಿ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಇನ್ನಾದರೂ ನಿದ್ರೆಯಿಂದ ಏಳಬೇಕು ಎನ್ನುತ್ತಿದ್ದಾರೆ ಅರಕಲವಾಡಿ ಭಾಗದ ಗ್ರಾಮಸ್ಥರು.

Tiger found in Chamarajanagara after leopard
ಅರಕಲವಾಡಿಯಲ್ಲಿ ಹುಲಿ ಭೀತಿ

By

Published : Nov 3, 2020, 9:26 PM IST

ಚಾಮರಾಜನಗರ: ಇಷ್ಟು ದಿನಗಳ ಕಾಲ ಚಿರತೆ ಭೀತಿಯಲ್ಲಿದ್ದ ಚಾಮರಾಜನಗರ ತಾಲೂಕಿನ ಅರಕಲವಾಡಿ ಭಾಗದ ಊರುಗಳಲ್ಲಿ ಈಗ ಹುಲಿ ಭೀತಿ ಎದುರಾಗಿದೆ. ಇದರಿಂದ ರೈತರು ಜಮೀನುಗಳಿಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಕಲವಾಡಿಯಲ್ಲಿ ಹುಲಿ ಭೀತಿ

ಅರಕಲವಾಡಿ ಎಲ್ಲೆಯಲ್ಲಿ ರೈತ ಉಮೇಶ್ ಎಂಬುವರ ಮುಂದೆಯೇ ಹುಲಿ ರಸ್ತೆ ದಾಟುವ ಮೂಲಕ ಹುಲಿ ಇರುವುದು ದೃಢಪಟ್ಟಿದ್ದು, ಬುಧವಾರ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಪ್ಲಾನ್ ಮಾಡಿದೆ.

ಅರಕಲವಾಡಿ ಸುತ್ತಮುತ್ತಲೂ ಪಾಳುಬಿದ್ದ ಕಲ್ಲು ಕ್ವಾರಿಗಳು ಹೆಚ್ಚಿರುವುದರಿಂದ ಚಿರತೆಗಳು ಅವಾಸ ಸ್ಥಾನ ಮಾಡಿಕೊಂಡಿದ್ದವು. ಆದರೆ ಹುಲಿಯೂ ಗ್ರಾಮದ ಜಮೀನಿಗೆ ಲಗ್ಗೆ ಇಟ್ಟಿರುವುದು ಆತಂಕ ಮೂಡಿಸಿದೆ‌.

ಈ ಕುರಿತು ಹುಲಿ ಪ್ರತ್ಯಕ್ಷದರ್ಶಿಯಾದ ಉಮೇಶ್ ಮಾತನಾಡಿ, ಇಷ್ಟು ದಿನ ಚಿರತೆ ಮಾತ್ರ ನೋಡುತ್ತಿದ್ದೆವು. ಈಗ ಹುಲಿಯೂ ಪ್ರತ್ಯಕ್ಷವಾಗಿರುವುದು ಭಯ ಮತ್ತು ಅಚ್ಚರಿಯಾಗಿದೆ. ಬೆಳೆ ಕಾಯಲು ರಾತ್ರಿ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಇನ್ನಾದರೂ ನಿದ್ರೆಯಿಂದ ಏಳಬೇಕು. 20-25 ಚಿರತೆಗಳಿದ್ದು, 1 ಚಿರತೆ ಹಿಡಿಯಲು 5 ತಿಂಗಳು ಸಮಯ ತೆಗೆದುಕೊಂಡರು ಎಂದು ಕಿಡಿಕಾರಿದರು.

ಅರಕಲವಾಡಿಯಲ್ಲಿ ಹುಲಿ ಭೀತಿ

ಮಾಹಿತಿ ನೀಡದ ಅಧಿಕಾರಿಗಳು: ಹುಲಿ ಕಾರ್ಯಾಚರಣೆ ಕುರಿತು ಚಾಮರಾಜನಗರ ಆರ್​ಎಫ್​​ಒ ಸಭ್ಯಶ್ರೀ ಹುಲಿ ಇರುವಿಕೆ, ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ನಿರಾಕರಿಸಿದರು‌. ಡಿಎಫ್ಒ ಸಂತೋಷ್ ಪ್ರತಿಕ್ರಿಯೆಗೆ ಸಿಗಲಿಲ್ಲ.

ABOUT THE AUTHOR

...view details