ಚಾಮರಾಜನಗರ:ದಟ್ಟಾರಣ್ಯ ಒಳಗೊಂಡಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪಕ್ಕೆ ಹುಲಿಯೊಂದು ಕಾಣಿಸಿಕೊಂಡಿದ್ದು, ಪ್ರವಾಸಿಗರಿಗೆ ಸಂತಸ ಉಂಟು ಮಾಡಿದೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ವ್ಯಾಘ್ರನ ದರ್ಶನ...ಪ್ರವಾಸಿಗರು ಫುಲ್ ಖುಶ್ - ಚಾಮರಾಜನಗರ ಲೆಟೆಸ್ಟ್ ನ್ಯೂಸ್
ಕೆ.ಗುಡಿಯ ಜಂಗಲ್ ಲಾಡ್ಜ್ ಸಫಾರಿಯಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಸಫಾರಿಯಲ್ಲಿದ್ದ ಪ್ರವಾಸಿಗರು ಫುಲ್ಖುಶ್ ಆದರು.
Tiger found in biligirirangan hills
ಕೆ.ಗುಡಿಯ ಜಂಗಲ್ ಲಾಡ್ಜ್ ಸಫಾರಿಯಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಸಫಾರಿಯಲ್ಲಿದ್ದ ಪ್ರವಾಸಿಗರು ಫುಲ್ಖುಶ್ ಆದರು. ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಂಡೀಪುರ ಸಫಾರಿಗೆ ಹೋಲಿಸಿಕೊಂಡರೆ ಕೆ.ಗುಡಿ ಸಫಾರಿಯಲ್ಲಿ ಹುಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ.
ಕಳೆದ 3 ತಿಂಗಳ ಹಿಂದೆ ಬಿಳಿಗಿರಿರಂಗನಬೆಟ್ಟದಿಂದ ಕೆ.ಗುಡಿಗೆ ಹೋಗುವ ಮಾರ್ಗ ಮಧ್ಯೆಯ ರಸ್ತೆಯಲ್ಲೇ ಹುಲಿ ಮಲಗಿ ಚಿನ್ನಾಟ ಆಡುತ್ತಿದ್ದನ್ನು ವಾಹನ ಸವಾರರು ಕಣ್ತುಂಬಿಕೊಂಡಿದ್ದರು. ಆದಾದ ಬಳಿಕ ಸಫಾರಿಯಲ್ಲಿ ಹುಲಿ ಕಾಣಿಸಿಕೊಂಡಿದೆ.