ಕರ್ನಾಟಕ

karnataka

By

Published : May 22, 2021, 7:02 PM IST

ETV Bharat / state

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯದಲ್ಲಿ ಹುಲಿ ಅನುಮಾನಸ್ಪದ ಸಾವು..

ಮೃತ ಹುಲಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದ ಎಸ್ಒಪಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಹುಲಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ..

tiger
tiger

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವನ್ಯಜೀವಿ ವಲಯದಲ್ಲಿನ ಸೋರಣಗುಡ್ಡ ಎಂಬಲ್ಲಿ ಹುಲಿಯೊಂದು ಅನುಮಾನಸ್ಪದವಾಗಿ ಮೃತಪಟ್ಟಿದೆ.

8-9 ವರ್ಷ ವಯಸ್ಸಿನ ಹೆಣ್ಣು ಹುಲಿ ಇದಾಗಿದ್ದು, ಆನೆಕಂದಕದಲ್ಲಿ ಶವ ದೊರಕಿದೆ. ಹಲ್ಲು,ಉಗುರುಗಳು ಮತ್ತಿತ್ತರೆ ಅಂಗಾಂಗಳಿದ್ದು,ವಿಷಪ್ರಾಶನವಾಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿರುವುದಾಗಿ ಅರಣ್ಯಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ಸದ್ಯ, ಮೃತ ಹುಲಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದ ಎಸ್ಒಪಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಹುಲಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ABOUT THE AUTHOR

...view details