ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ ಕೆ.ಗುಡಿಯಲ್ಲಿ ಗಂಡು ಹುಲಿ ಸಾವು - ಚಾಮರಾಜನಗರ

ಬಿಆರ್​ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆ.ಗುಡಿ ವಲಯ ವ್ಯಾಪ್ತಿಯ ಕಾಳಿಕಾಂಬ ಕಾಲೋನಿ ಬಳಿ ಗಂಡು ಹುಲಿ ಸಾವನ್ನಪ್ಪಿದೆ.

Tiger death
ಹುಲಿ ಸಾವು

By

Published : May 8, 2020, 11:25 AM IST

ಚಾಮರಾಜನಗರ: ಹೃದಯಾಘಾತದಿಂದ ಹುಲಿ ಮೃತಪಟ್ಟಿರುವ ಘಟನೆ ಬಿಆರ್​ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆ.ಗುಡಿ ವಲಯ ವ್ಯಾಪ್ತಿಯ ಕಾಳಿಕಾಂಬ ಕಾಲೋನಿ ಬಳಿ ನಡೆದಿದೆ.

ಮೃತಪಟ್ಟ ಗಂಡು ಹುಲಿಗೆ 12 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಾಲೋನಿಯ ಸಮೀಪದ ಸುವರ್ಣಾವತಿ ಕಾಲುವೆ ಬಳಿ ಮೇ 2ರಂದು ಇದು ಮೃತಪಟ್ಟಿದೆ ಎನ್ನಲಾಗ್ತಿದೆ‌.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಹುಲಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ವರದಿ ಬಂದಿರುವುದಾಗಿ ಡಿಸಿಎಫ್ ಸಂತೋಷ್ ಮಾಹಿತಿ ನೀಡಿದ್ದಾರೆ.

ಮೃತಪಟ್ಟಿರುವ ಹುಲಿ ಕಾಳಿಕಾಂಬ ಕಾಲೋನಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ಭಯಹುಟ್ಟಿಸಿದ್ದ ವ್ಯಾಘ್ರವೇ ಇರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details