ಹುಣಸೂರು:ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಸುಮಾರು ನಾಲ್ಕೈದು ವರ್ಷದ ಗಂಡು ಹುಲಿ ಕಳೇಬರ ಪತ್ತೆಯಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ವಲಯದ ಕಾಕನಕೋಟೆ ಗಸ್ತಿನ ಬಳ್ಳೆಕೆರೆ ಬಳಿ ಹುಲಿ ಕಳೇಬರ ಪತ್ತೆಯಾಗಿದ್ದು, ಹುಲಿಯು ಮತ್ತೊಂದು ಹುಲಿಯ ಜೊತೆ ಕಾದಾಟ ನಡೆಸಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ ಎಂದು ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಮಹೇಶ್‌ಕುಮಾರ್, ಎಸಿಎಫ್ ಮಹದೇವ್ ಎಸ್.ಪಿ., ಆರ್ಎಫ್ಓ ಮಧು ಕೆ.ಎಲ್. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎನ್.ಟಿ.ಸಿ.ಎ.ಯ ನಾಮನಿರ್ದೇಶಿತ ಪ್ರತಿನಿಧಿ ರಘುರಾಂ, ವನ್ಯಜೀವಿ ಪರಿಪಾಲಕ ಪೂರ್ವಜ್ ವಿಶ್ವನಾಥ್ ಸಮ್ಮುಖದಲ್ಲಿ ಪಶುವೈದ್ಯಾಧಿಕಾರಿ ಡಾ. ಮುಜೀಬ್‌ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು.
ಇದನ್ನೂ ಓದಿ:ದೇಶದಲ್ಲಿ 2 ಲಕ್ಷ ಗಡಿ ದಾಟಿದ ಕೋವಿಡ್ ಸೋಂಕಿತ ಮೃತರ ಸಂಖ್ಯೆ