ಚಾಮರಾಜನಗರ: ಹುಲಿ ಇರುವಿಕೆಯ ಪರಿಶೀಲನೆಗೆ ತೆರಳಿದ್ದ ವೇಳೆ ವಲಯ ಅರಣ್ಯಾಧಿಕಾರಿ ಮೇಲೆ ಹುಲಿಯೊಂದು ದಾಳಿ ಮಾಡಿರುವ ಘಟನೆ ಗೋಪಾಲಸ್ವಾಮಿಬೆಟ್ಟ ವಲಯದ ಕಳ್ಳೀಪುರ ಬಳಿಯ ಹಗ್ಗದಹಳ್ಳ ಎಂಬಲ್ಲಿ ನಡೆದಿದೆ.
ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿದಾಳಿ.. ಪ್ರಾಣಾಪಾಯದಿಂದ ಪಾರಾದ ಅರಣ್ಯಾಧಿಕಾರಿ.. - ಚಾಮರಾಜನಗರ
ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಹುಲಿ ದಾಳಿಗೊಳಗಾದವರು. ಜಮೀನಿನಲ್ಲಿ ಹುಲಿ ಇದೆ ಎಂದು ರೈತರೊಬ್ಬರು ನೀಡಿದ್ದ ಮಾಹಿತಿ ಮೇರೆಗೆ ಪರಿಶೀಲನೆಗೆ ತೆರಳಿದ್ದ ರಾಘವೇಂದ್ರ ಅವರ ಮೇಲೆ ಗಾಬರಿಬಿದ್ದ ಹುಲಿ ದಾಳಿ ಮಾಡಿದೆ. ಸದ್ಯ ಅರಣ್ಯ ಸಿಬ್ಬಂದಿ ರಾಘವೇಂದ್ರ ಅವರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
![ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿದಾಳಿ.. ಪ್ರಾಣಾಪಾಯದಿಂದ ಪಾರಾದ ಅರಣ್ಯಾಧಿಕಾರಿ..](https://etvbharatimages.akamaized.net/etvbharat/prod-images/768-512-3712156-thumbnail-3x2-giri.jpg)
ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹುಲಿ ದಾಳಿ
ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹುಲಿಯ ದಾಳಿಗೊಳಗಾದವರು. ಜಮೀನಿನಲ್ಲಿ ಹುಲಿ ಇದೆ ಎಂದು ರೈತರೊಬ್ಬರು ನೀಡಿದ್ದ ಮಾಹಿತಿ ಮೇರೆಗೆ ಪರಿಶೀಲನೆಗೆ ತೆರಳಿದ್ದ ರಾಘವೇಂದ್ರ ಅವರ ಮೇಲೆ ಗಾಬರಿಬಿದ್ದ ಹುಲಿ ದಾಳಿ ಮಾಡಿದೆ.ಸದ್ಯ ಅರಣ್ಯ ಸಿಬ್ಬಂದಿ ರಾಘವೇಂದ್ರ ಅವರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.