ಚಾಮರಾಜನಗರ :ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ಮೂಕಳ್ಳಿ ಕಾಲೋನಿ ಹಾಗೂ ಶಿವಪುರ ಸಮೀಪದ ಕಲ್ಕಟ್ಟೆ ಕೆರೆಯಲ್ಲಿ ನಡೆದಿದೆ. ಇಬ್ಬರು ಬಾಲಕರು ನೀರುಪಾಲಾದ್ರೆ, ಇನ್ನೊಬ್ಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲೋನಿಯ ನಿವಾಸಿಗಳಾದ ಮಹೇಶ್ (15) ಹಾಗೂ ವಿಶ್ವ (17) ಹೊಸಕಟ್ಟೆ ಎಂಬ ಕೆರೆಯಲ್ಲಿ ಈಜಲು ತೆರಳಿದ್ದಾಗ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಯಾವುದೇ ದೂರಾಗಲಿ, ಪ್ರಕರಣವಾಗಲಿ ದಾಖಲಾಗಿಲ್ಲ.