ಚಾಮರಾಜನಗರ: ಆಟವಾಡುತ್ತಿದ್ದ ಮೂವರು ಪುಟ್ಟ ಮಕ್ಕಳು ನೀರುಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿಯಲ್ಲಿ ನಡೆದಿದೆ.
ಮಲೆಮಹದೇಶ್ವರ ಬೆಟ್ಟದ ಬಳಿ ಹಳ್ಳದಲ್ಲಿ ಕೊಚ್ಚಿ ಹೋದ ಮೂವರು ಪುಟಾಣಿಗಳು! - ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿ
ಆಟವಾಡುತ್ತಿದ್ದ ಮೂವರು ಪುಟ್ಟ ಮಕ್ಕಳು ನೀರುಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿಯಲ್ಲಿ ನಡೆದಿದೆ.

ಹಳ್ಳದಲ್ಲಿ ಕೊಚ್ಚಿ ಹೋದ ಮೂವರು ಪುಟಾಣಿಗಳು!
ನಿಖಿತಾ(6), ಅನುಪಮಾ(5), ಪ್ರಣಿತಾ(5) ಮೃತ ದುರ್ದೈವಿಗಳು ಎನ್ನಲಾಗಿದೆ. ಇಂದು ಅಂಗವಾಡಿಗೆ ರಜೆಯಾದ್ದರಿಂದ ತಾತನೊಂದಿಗೆ ಜಮೀನಿಗೆ ತೆರಳಿದ್ದು, ಆಟವಾಡುತ್ತಿದ್ದ ವೇಳೆ ಜಮೀನನ ಬಳಿ ಹರಿಯುತ್ತಿದ್ದ ಹಳ್ಳದಲ್ಲಿ ನೀರಿನ ರಭಸಕ್ಕೆ ಮೂವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Oct 13, 2019, 9:01 PM IST