ಚಾಮರಾಜನಗರ: ಗ್ರಾಮದ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಗ್ರಾಮದ ಕೆಲ ಮುಖಂಡರು ಯುವಕರಿಗೆ ಧಮ್ಕಿ ಹಾಕಿರುವ ಘಟನೆ ಹನೂರು ತಾಲೂಕಿನ ಶೆಟ್ಟಳ್ಳಿಯಲ್ಲಿ ನಡೆದಿದೆ
ಚಾಮರಾಜನಗರದಲ್ಲಿ ಗ್ರಾಮದ ಸಮಸ್ಯೆ ಕುರಿತು ಡಿಸಿಗೆ ದೂರು ನೀಡಿದಕ್ಕೆ ಯುವಕರಿಗೆ ಧಮ್ಕಿ...! - Threats to youth in Shettalli Chamarajanagar
ಗ್ರಾಮದ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಗ್ರಾಮದ ಕೆಲ ಮುಖಂಡರು ಯುವಕರಿಗೆ ಧಮ್ಕಿ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶೆಟ್ಟಳ್ಳಿಯಲ್ಲಿ ನಡೆದಿದೆ
ಚಾಮರಾಜನಗರದಲ್ಲಿ ಯುವಕರಿಗೆ ಧಮ್ಕಿ
ಕೃಷ್ಣ, ಯೋಗೇಶ್, ರಾಘವೇಂದ್ರ ಎಂಬ ಸ್ನೇಹಿತರು ಗ್ರಾಮದ ನೈರ್ಮಲ್ಯ, ಚರಂಡಿ ಸಮಸ್ಯೆ ಹಾಗೂ ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಜಿಲ್ಲಾಧಿಕಾರಿಗೆ ಅಂಚೆ ಮೂಲಕ ದೂರು ನೀಡಿದ್ದಾರೆ. ಇದನ್ನು, ತಿಳಿದ ಗ್ರಾಮದ ಮುಖಂಡ ಮಾದಪ್ಪ ಹಾಗೂ ಇನ್ನಿತರರು ಯುವಕರ ಮನೆಗೆ ತೆರಳಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಇದರಿಂದ ಹೆದರಿದ ಯುವಕರು ದೂರಿನ ಪ್ರತಿ ಹಾಗೂ ತಮ್ಮ ರಕ್ಷಣೆಗಾಗಿ ಮೊರೆ ಇಟ್ಟ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಳಲು ತೋಡಿಕೊಂಡಿದ್ದಾರೆ.