ಕರ್ನಾಟಕ

karnataka

ETV Bharat / state

ಗೆಳೆಯನನ್ನು ಬಿಡಿಸಲು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ ಜೈಲುಪಾಲು - Person arrested in Chamarajnagar

ಚಾಮರಾಜನಗರದ ಬೇಗೂರು ಪೊಲೀಸ್ ಠಾಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಸ್ನೇಹಿತನನ್ನು ಬಿಡಿಸಲು ಬಂದ ವ್ಯಕ್ತಿಯೋರ್ವ ಜೈಲುಪಾಲಾಗಿದ್ದಾನೆ.

Threatening to Lady Police on Friend Arrest:   Person arrested in Chamarajnagar
ಗೆಳೆಯನನ್ನು ಬಿಡಿಸಲು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ ಜೈಲುಪಾಲು

By

Published : Nov 21, 2021, 1:25 PM IST

ಚಾಮರಾಜನಗರ: ಸ್ನೇಹಿತನನ್ನು ಏಕಾಏಕಿ ಬಂಧಿಸಿದ್ದಾರೆಂದು ಆಕ್ರೋಶಗೊಂಡ ವ್ಯಕ್ತಿಯೋರ್ವ ಮಹಿಳಾ ಪಿಎಸ್ಐಗೆ ಧಮ್ಕಿ ಹಾಕಿದ್ದಕ್ಕಾಗಿ ಆತನನ್ನೂ ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ (Begur Police station) ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ‌ ಚೆನ್ನವಡೆಯನಪುರ ಗ್ರಾಮದ ಪುಟ್ಟಣ್ಣ ಎಂಬಾತ ಬಂಧಿತ. ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಸಿದ್ದರಾಜು ಎಂಬುವನನ್ನು ಬಂಧಿಸಲು ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಬೇಗೂರು ಪಿಎಸ್ಐ ರಿಹಾನಾ ಬೇಗಂ ಸಿದ್ದರಾಜುನನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು.

ಗೆಳೆಯನನ್ನು ಬಂಧಿಸಿದ ವಿಚಾರ ತಿಳಿದ ಪುಟ್ಟಣ್ಣ ಠಾಣೆಗೆ ತೆರಳಿ ಪಿಎಸ್ಐಗೆ ಧಮ್ಕಿ ಹಾಕಿ ಸ್ನೇಹಿತ ಸಿದ್ದರಾಜುನನ್ನು ಕರೆದೊಯ್ಯಲು ಎಳೆದಾಡಿದ್ದಾನೆ ಎನ್ನಲಾಗಿದೆ.‌ ಈ ಸಂಬಂಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಪುಟ್ಟಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ, ಗೆಳೆಯನನ್ನು ಬಿಡಿಸಲು ಬಂದ ಸ್ನೇಹಿತ, ತಾನೂ ಜೈಲು ಸೇರಿಕೊಂಡಿದ್ದಾನೆ.

ಇದನ್ನೂ ಓದಿ:ಪತ್ನಿ ಸಾವಿನ ಸುದ್ದಿ ತಿಳಿದು ಪತಿಯೂ ಆತ್ಮಹತ್ಯೆ; ಸಾವಲ್ಲೂ ಒಂದಾದ ನವದಂಪತಿ

ABOUT THE AUTHOR

...view details