ಕರ್ನಾಟಕ

karnataka

By

Published : Mar 9, 2021, 3:16 PM IST

ETV Bharat / state

ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾಗರ: ವಿವಿಧ ಸೇವೆಗಳಿಂದ ಸಂಗ್ರಹವಾದ ಹಣ ಇಷ್ಟು..

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಹೊರಗಿನ ಭಕ್ತರಿಗೆ ನಿರ್ಬಂಧ ಹೇರಿದ್ದು ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.

Thousand's of Devotees at Male Mahadeshwara Hill
ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾಗರ

ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಹೊರಗಿನ ಭಕ್ತರಿಗೆ ನಾಲ್ಕು ದಿನಗಳ ಕಾಲ ನಿರ್ಬಂಧ ಹೇರಿದ್ದು, ಕಳೆದ ಮೂರು ದಿನಗಳಿಂದ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ದೇಗುಲಕ್ಕೆ ವಿವಿಧ ಸೇವೆಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬಂದಿದೆ. ಫೆ. 6 ರಂದು ಸೇವೆಗಳು, ಉತ್ಸವ, ಲಾಡು ಮಾರಾಟ, ಮಿಶ್ರ ಪ್ರಸಾದ, ಬೆಳ್ಳಿ ರಥ ಸೇರಿದಂತೆ ವಿವಿಧ ಸೇವೆಗಳಿಂದ 14,16, 478 ರೂ. ಸಂಗ್ರಹವಾಗಿದ್ದರೆ, ಫೆ. 7 ರಂದು ಬರೋಬ್ಬರಿ 31,47,636, ಮತ್ತು ಫೆ. 8 ರಂದು 20,00, 608 ರೂ. ದೇಗುಲದ ಆದಾಯಕ್ಕೆ ಸಂದಾಯವಾಗಿದೆ. ಒಟ್ಟು 3 ದಿನಗಳಲ್ಲಿ 65 ಲಕ್ಷಕ್ಕೂ ಹೆಚ್ಚು ಹಣವನ್ನು ಭಕ್ತರು ವಿವಿಧ ಸೇವೆಗಳ ಮೂಲಕ ಮಾದಪ್ಪನಿಗೆ ಅರ್ಪಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸಾಗರ

ಇದನ್ನೂ ಓದಿ: ಕೃಷಿ ವಿದ್ಯಾರ್ಥಿಗಳಿಂದ ಗ್ರಾಮ ವಾಸ್ತವ್ಯ: ರೈತರಿಗೆ ಸಾವಯವ ಕೃಷಿಯ ಅರಿವು

ಬಸ್ ಸಿಗದೆ ಭಕ್ತರ ಪರದಾಟ: ಸೋಮವಾರ ಭಕ್ತರ ದಂಡೇ ಪಾದಯಾತ್ರೆ ಮೂಲಕ ಹರಿದು ಬಂದ ಪರಿಣಾಮ, ಕನಕಪುರ, ಬೆಂಗಳೂರು ಹಾಗೂ ಮಂಡ್ಯ ಭಾಗಕ್ಕೆ ಬಸ್ ಸಿಗದೆ ಇತರ ಭಕ್ತರು ಪರಿತಪಿಸಿದರು.

ಅವ್ಯವಸ್ಥೆಯ ವಿರುದ್ಧ ಭಕ್ತರ ಆಕ್ರೋಶ

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ 4 ದಿನಗಳ ಕಾಲ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಯವರು ಹೊರತುಪಡಿಸಿ ಹೊರಗಿನ ಭಕ್ತರಿಗೆ ನಿರ್ಬಂಧ ಹೇರಿದ್ದು, 2-3 ದಿನ ಮುಂಚಿತವಾಗಿಯೇ ದೂರದ ಮಂಡ್ಯ, ಕನಕಪುರ, ಬೆಂಗಳೂರಿನಿಂದ ಪಾದಯಾತ್ರೆ ಮೂಲಕ ಭಕ್ತರು ಬಂದಿದ್ದರು‌. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆಂಬ ನಿರೀಕ್ಷೆಯಿದ್ದರೂ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿತೆಂದು ನೂರಾರು ಭಕ್ತರು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹಾಗೂ ಇನ್ನಿತರ ಅಧಿಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭಕ್ತರ ಪ್ರತಿಭಟನೆ ಬಳಿಕ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.

ABOUT THE AUTHOR

...view details