ಚಾಮರಾಜನಗರ: ಬೇಟೆಯಾಡಲು ಕಾಡು ಪ್ರವೇಶಿಸಿದ್ದ ಮೂವರು ಐನಾತಿಗಳನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಂಸಕ್ಕಾಗಿ ಕಾಡು ಹೊಕ್ಕ ಮೂವರಿಗೆ ಜೈಲೂಟ - ಬೇಟೆಯಾಡಲು ಕಾಡು ಪ್ರವೇಶಿಸಿದ್ದ ಮೂವರು ಬಂಧನ
ಕಾಡು ಪ್ರಾಣಿಗಳ ಬೇಟೆಯಾಡಲೆಂದು ಕಾಡಿಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಮೂವರು ಬೇಟೆಗಾರರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಿಂದುವಾಡಿ ಗ್ರಾಮದ ಇನಾಯತ್ ಪಾಶಾ(22), ವಿಜಯ್(23), ಮಾದೇವಶೆಟ್ಟಿ ಎಂಬವರನ್ನು ಬಂಧಿಸಿದ್ದು, ಅದೇ ಗ್ರಾಮದ ಇನ್ನೋರ್ವ ಜಾಕೀರ್ ಪಾಶಾ ಎಂಬಾತ ಪರಾರಿಯಾಗಿದ್ದಾನೆ. ಪ್ರಾಣಿ ಬೇಟೆಗಾಗಿ ಅಕ್ರಮವಾಗಿ ಬಂದೂಕು ಹಿಡಿದುಕೊಂಡು ಕಾಡಿನೊಳಗೆ ಸಾಗಿ, ಕಾಡಂಚಿನ ಪ್ರದೇಶದಿಂದ ಹಿಂತಿರುಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಅರಿತ ಗ್ರಾಮಾಂತರ ಠಾಣೆ ಪೊಲೀಸರು, ದಾಳಿ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 2 ನಾಡಬಂದೂಕು, 1ಮಚ್ಚು, ಲೋಹದ 8 ಗುಂಡುಗಳು, ಲೋಹದ ಸಣ್ಣ ಸಣ್ಣ ಬಾಲ್ಸ್ ಗಳು, ಚಿನಕುರಳಿ ಪಟಾಕಿ ಸರ, ಗನ್ ಪೌಡರ್ ವಶಪಡಿಸಿಕೊಂಡಿದ್ದು, ಪರಾರಿಯಾದ ಅಸಾಮಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.