ಕರ್ನಾಟಕ

karnataka

ETV Bharat / state

ಹೋಂ ಐಸೋಲೇಷನ್ ಇಲ್ಲ,ಸೋಂಕಿತರು ಕೇರ್ ಸೆಂಟರ್​ಗೆ ದಾಖಲಾಗಬೇಕು : ಸಚಿವ ಸುರೇಶ್ ಕುಮಾರ್ - ಹೋಂ ಐಸೋಲೇಷನ್

5 ದಿನಗಳಿಂದ ಜಿಲ್ಲೆಯ ಎಲ್ಲಾ ತಾಲೂಕಿನ ಕೆಲ ಗ್ರಾಪಂಗಳಿಗೆ ಭೇಟಿ ‌ನೀಡಿ ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಿರುವ ಗ್ರಾಮ ಪಂಚಾಯತ್ ಕಾರ್ಯಪಡೆ ಸಭೆ ನಡೆಸಿ ಮಾಹಿತಿ‌ ಪಡೆಯುತ್ತಿದ್ದೇನೆ. ಪರಿಸ್ಥಿತಿ ಅವಲೋಕಿಸಿದ ಬಳಿಕ ಕೆಲ ಸೂಚನೆ ನೀಡುತ್ತಿದ್ದೇನೆ.ಜಿಲ್ಲೆಯ 503 ಹಳ್ಳಿಗಳ ಪೈಕಿ, 174 ಗ್ರಾಮಗಳು ಕೊರೊನಾ ಮುಕ್ತವಾಗಿವೆ. ಮುಂದಿನ ದಿನಗಳಲ್ಲಿ ಸೋಂಕು ಇರುವ ಹಳ್ಳಿಗಳನ್ನು ಕೊರೊನಾ ಮುಕ್ತಗೊಳಿಸಲು ಕಟ್ಟುನಿಟ್ಟಾಗಿ ಕ್ರಮಕೈಗೊಳಲಾಗುತ್ತದೆ..

ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

By

Published : May 29, 2021, 11:04 PM IST

ಕೊಳ್ಳೇಗಾಲ : ಸೋಂಕಿನ ಲಕ್ಷಣಗಳು ಇಲ್ಲದೇ ಪಾಸಿಟಿವ್ ಬಂದವರಿಗೆ ಮನೆಯಲ್ಲಿ ಇದ್ದು ಚಿಕಿತ್ಸೆ‌ ಪಡೆಯಲು ಇನ್ಮುಂದೆ ಅವಕಾಶವಿಲ್ಲ. ಪ್ರತಿಯೊಬ್ಬ ಸೋಂಕಿತರು ಕೋವಿಡ್ ‌ಕೇರ್ ಸೆಂಟರ್​ಗೆ ದಾಖಲಾಗಬೇಕೆಂದು ಸಚಿವ ಸುರೇಶ್‌ಕುಮಾರ್ ತಿಳಿಸಿದರು.

ತಾಲೂಕಿನ ಜಾಗೇರಿ ಗ್ರಾಮದ ಶಾಲಾ ಆವರಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಿರುವ ಗ್ರಾಮ ಪಂಚಾಯತ್ ಕಾರ್ಯಪಡೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ಕೊರೊನಾ ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿವೆ. ಅದಕ್ಕಾಗಿ ಹಳ್ಳಿಗಳ ಕಡೆ ವಿಶೇಷವಾಗಿ ನಾವು ಗಮನ ಹರಿಸುತ್ತಿದ್ದೇವೆ.

5 ದಿನಗಳಿಂದ ಜಿಲ್ಲೆಯ ಎಲ್ಲಾ ತಾಲೂಕಿನ ಕೆಲ ಗ್ರಾಪಂಗಳಿಗೆ ಭೇಟಿ ‌ನೀಡಿ ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಿರುವ ಗ್ರಾಮ ಪಂಚಾಯತ್ ಕಾರ್ಯಪಡೆ ಸಭೆ ನಡೆಸಿ ಮಾಹಿತಿ‌ ಪಡೆಯುತ್ತಿದ್ದೇನೆ. ಪರಿಸ್ಥಿತಿ ಅವಲೋಕಿಸಿದ ಬಳಿಕ ಕೆಲ ಸೂಚನೆ ನೀಡುತ್ತಿದ್ದೇನೆ.

ಜಿಲ್ಲೆಯ 503 ಹಳ್ಳಿಗಳ ಪೈಕಿ, 174 ಗ್ರಾಮಗಳು ಕೊರೊನಾ ಮುಕ್ತವಾಗಿವೆ. ಮುಂದಿನ ದಿನಗಳಲ್ಲಿ ಸೋಂಕು ಇರುವ ಹಳ್ಳಿಗಳನ್ನು ಕೊರೊನಾ ಮುಕ್ತಗೊಳಿಸಲು ಕಟ್ಟುನಿಟ್ಟಾಗಿ ಕ್ರಮಕೈಗೊಳಲಾಗುತ್ತದೆ.

ಕುಂತೂರು ಪಂಚಾಯತ್ ವ್ಯಾಪ್ತಿಯ ಕಂಟೇನ್ಮೆಂಟ್‌ ಝೋನ್​ಗಳಿಗೂ ಭೇಟಿ ನೀಡಿದ್ದೇನೆ. ಗ್ರಾಪಂ ಕಾರ್ಯ ಪಡೆ ಜೊತೆಯಲ್ಲೂ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮಂಡ್ಯ ಹಾಲು ಒಕ್ಕೂಟದ ಹಗರಣವನ್ನು ಎಸಿಬಿಗೆ ವಹಿಸುವುದು ಸೂಕ್ತ: ಚಲುವರಾಯಸ್ವಾಮಿ

ABOUT THE AUTHOR

...view details