ಚಾಮರಾಜನಗರ:ಗಮನ ಬೇರೆಡೆ ಸೆಳೆದು ವ್ಯಾಪಾರಿಯೊಬ್ಬರಿಂದ 5 ಲಕ್ಷ ರೂ. ಎಗರಿಸಿರುವ ಘಟನೆ ಕೊಳ್ಳೇಗಾಲದ ಎಪಿಎಂಸಿ ಬಳಿ ನಡೆದಿದೆ. ಬಾಲಾಜಿ ಎಂಬ ತರಕಾರಿ ವ್ಯಾಪಾರಿ ಹಣ ಕಳೆದುಕೊಂಡಿದ್ದಾರೆ. ಇವರು ಬ್ಯಾಂಕಿನಿಂದ ಹಣ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದರು. ಅಂಗಡಿಗೆ ಹಿಂತಿರುಗಿದಾಗ ನಾಲ್ವರ ಗ್ಯಾಂಗ್ ಕಳ್ಳತನ ಮಾಡಿದ್ದಾರೆ.
ಕೊಳ್ಳೇಗಾಲದ ವ್ಯಾಪಾರಿಗೆ ಮಕ್ಮಲ್ ಟೋಪಿ: ಸ್ಕೂಟರ್ ಡಿಕ್ಕಿಯಲ್ಲಿದ್ದ ₹5 ಲಕ್ಷ ಮಾಯ - Thieves theaft from the vegetable merchant
ತರಕಾರಿ ವ್ಯಾಪಾರಿಯ ಸ್ಕೂಟರ್ ಡಿಕ್ಕಿಯಲ್ಲಿದ್ದ ಐದು ಲಕ್ಷ ರೂಪಾಯಿ ಹಣವನ್ನು ಕಳ್ಳರು ಎಗರಿಸಿದ್ದಾರೆ.
ಕೊಳ್ಳೇಗಾಲ
ಇದನ್ನೂ ಓದಿ:ಚಿನ್ನಾಭರಣ ದೋಚಿದ್ದ ಅಣ್ಣ-ತಮ್ಮ ಸೇರಿ ಮೂವರು ಅಂದರ್: ಕಳ್ಳತನಕ್ಕೆ ಪೋಷಕರು ಸಾಥ್
ಬಾಲಾಜಿ ಅವರು ಸ್ಕೂಟರ್ ಕೀಯನ್ನು ಅಲ್ಲೇ ಬಿಟ್ಟಿದ್ದರಿಂದ ಮೂವರು ಮಾತನಾಡುತ್ತಾ ಗಮನ ಬೇರೆಡೆ ಸೆಳೆದು ಮತ್ತೋರ್ವ ಹಣ ಎಗರಿಸಿದ್ದಾನೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.