ಕೊಳ್ಳೇಗಾಲ:ಪ್ಯಾಂಟ್ ಸಮೇತ ಕದ್ದಿದ್ದ ಹಣವನ್ನು ಕಳ್ಳನೋರ್ವ ಮರಳಿ ವಾರಸುದಾರರಿಗೆ ನೀಡಿದ ಘಟನೆ ಪಟ್ಟಣದ ನೂರ್ ಮೊಹಲ್ಲಾ ಬಡಾವಣೆಯಲ್ಲಿ ನಡೆದಿದೆ.
ಅಫ್ಸರ್ ಎಂಬುವವರು ತಮ್ಮ ಮನೆಯಲ್ಲಿ ನೇತು ಹಾಕಿದ್ದ ಪ್ಯಾಂಟ್ನಲ್ಲಿ 1.40 ಲಕ್ಷ ರೂ. ಹಣ ಇಟ್ಟಿದ್ದರು. ಕಳ್ಳನೋರ್ವ ಕಿಟಕಿಯ ಮೂಲಕ ಪ್ಯಾಂಟ್ ಸಮೇತ ಹಣವನ್ನು ಕದ್ದೊಯ್ದಿದ್ದ. ಆದರೆ ವಿಚಿತ್ರ ಎಂಬಂತೆ ಇಂದು ಮುಂಜಾನೆ ಪ್ಯಾಂಟ್ ಸಮೇತ ಕದ್ದ ಹಣ ಇಟ್ಟು ಹೋಗಿದ್ದಾನೆ.
ಬುಧವಾರ ರಾತ್ರಿ ಮನೆಯ ಹ್ಯಾಂಗರ್ನಲ್ಲಿ ನೇತು ಹಾಕಿದ್ದ ಪ್ಯಾಂಟ್ ಅನ್ನು ಅದರಲ್ಲಿದ್ದ 1.40 ಲಕ್ಷ ರೂ. ಸಮೇತ ಕಳ್ಳನೋರ್ವ ಕಿಟಕಿಯ ಮೂಲಕ ಎಗರಿಸಿ ಪರಾರಿಯಾಗಿದ್ದ. ಆದರೆ ಇಂದು ಮುಂಜಾನೆ ಕದ್ದ ದುಡ್ಡನ್ನು ಪ್ಯಾಂಟ್ ಸಮೇತ ಮನೆ ಮುಂದೆ ಇಟ್ಟು ಹೋಗಿದ್ದಾನೆ.