ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆ ತಾಲೂಕು ಕಚೇರಿ ದುಸ್ಥಿತಿ: ಮಾಸ್ಕ್ ಮಾರುವ ಹುಡುಗನಿಂದ ಥರ್ಮಲ್ ಟೆಸ್ಟ್..! - Gundlupet Taluk Office news

ಥರ್ಮಲ್ ಟೆಸ್ಟ್ ಮಾತ್ರ ಮಾಸ್ಕ್ ಮಾರುವ ಹುಡುಗ ಮಾಡುತ್ತಿರುವುದು ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಗಮನಕ್ಕೆ ಬಂದರೂ ತಲೆಕೆಡಿಸಿಕೊಳ್ಳದಿರುವ ಆರೋಪ ಕೇಳಿಬಂದಿದೆ.

ಮಾಸ್ಕ್ ಮಾರುವ ಹುಡುಗನಿಂದ ಥರ್ಮಲ್ ಟೆಸ್ಟ್
ಮಾಸ್ಕ್ ಮಾರುವ ಹುಡುಗನಿಂದ ಥರ್ಮಲ್ ಟೆಸ್ಟ್

By

Published : Jun 29, 2020, 4:40 PM IST

Updated : Jun 29, 2020, 6:19 PM IST

ಚಾಮರಾಜನಗರ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಗುಂಡ್ಲುಪೇಟೆಯಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತೆ ಮಾಸ್ಕ್ ಮಾರುವ ಹುಡುಗ ಥರ್ಮಲ್ ಟೆಸ್ಟ್ ಮಾಡಿದ್ದಾನೆ.

ಮಾಸ್ಕ್ ಮಾರುವ ಹುಡುಗನಿಂದ ಥರ್ಮಲ್ ಟೆಸ್ಟ್

ತಾಲೂಕು ಕಚೇರಿಗೆ ನಿತ್ಯ ನೂರಾರು ಮಂದಿ ಎಡತಾಕುವುದರಿಂದ ಸ್ಯಾನಿಟೈಸರ್ ಹಾಗೂ ಥರ್ಮಲ್ ಟೆಸ್ಟ್ ಮಾಡಲೇನೋ ಪ್ರಾರಂಭಿಸಿದ್ದಾರೆ. ಆದರೆ, ಥರ್ಮಲ್ ಟೆಸ್ಟ್ ಮಾತ್ರ ಮಾಸ್ಕ್ ಮಾರುವ ಹುಡುಗ ಮಾಡುತ್ತಿರುವುದು ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಗಮನಕ್ಕೆ ಬಂದರೂ ತಲೆಕೆಡಿಸಿಕೊಳ್ಳದಿರುವ ಆರೋಪ ಕೇಳಿಬಂದಿದೆ.

ಮಾಸ್ಕ್ ಮಾರುವ ಹುಡುಗನಿಂದ ಥರ್ಮಲ್ ಟೆಸ್ಟ್

14-15 ವರ್ಷದ ಹುಡುಗನೋರ್ವ ಎಡಗೈಯಲ್ಲಿ ಮಾಸ್ಕ್ ಹಿಡಿದು ಬಲಗೈಯಲ್ಲಿ ಥರ್ಮಲ್ ಟೆಸ್ಟ್ ನಡೆಸುತ್ತಿರುವ ಫೋಟೋಗಳನ್ನು ಸೆರೆ ಹಿಡಿದು ಸ್ಥಳೀಯರೊಬ್ಬರು ಈಟಿವಿ ಭಾರತಕ್ಕೆ ನೀಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ತಹಶಿಲ್ದಾರ್ ನಂಜುಡಯ್ಯ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.

Last Updated : Jun 29, 2020, 6:19 PM IST

ABOUT THE AUTHOR

...view details