ಕರ್ನಾಟಕ

karnataka

ETV Bharat / state

ಹೋಂ‌ ಐಸೋಲೇಷನ್‌ನಲ್ಲಿ ಕೇವಲ 6 ಮಂದಿ.. ಚಾಮರಾಜನಗರ ಕೋವಿಡ್ ಆಸ್ಪತ್ರೆ ಖಾಲಿ.. - chamarajanagar latest news

ಕೇರಳ ಮತ್ತು ತಮಿಳುನಾಡಿನಲ್ಲಿ ಕಂಡಿದ್ದ ಕೊರೊನಾ ಏರುಗತಿ ಜಿಲ್ಲೆಗೆ ಆತಂಕಕಾರಿಯಾಗಿ ಪರಿಣಮಿಸಿತ್ತು. ಸದ್ಯ, ಈಗ ಕೊರೊನಾತಂಕ ದೂರವಾಗಿದೆ. ನಿರ್ಲಕ್ಷ್ಯ ವಹಿಸದೇ ಮುನ್ನೆಚ್ಚರಿಕೆ ವಹಿಸಿದಾಗ ಮಾತ್ರ ಈ ಸಡಗರ ಮುಂದುವರೆಯಲು ಸಾಧ್ಯ ಎಂಬುದು ವೈದ್ಯರ ಮಾತಾಗಿದೆ..

there is no patients in chamarajanagar covid hospital
ಹೋಂ‌ ಐಸೋಲೇಷನ್ ನಲ್ಲಿ ಕೇವಲ 6 ಮಂದಿ

By

Published : Nov 3, 2021, 8:57 AM IST

ಚಾಮರಾಜನಗರ: ಕಳೆದ 3 ದಿನಗಳಿಂದ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆ ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಇಳಿದಿವೆ. ಚಾಮರಾಜನಗರ ಕೋವಿಡ್ ಆಸ್ಪತ್ರೆ ಖಾಲಿ ಖಾಲಿಯಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ವ್ಯಕ್ತಿ ಕೂಡ ಗುಣಮುಖನಾಗಿ ಮನೆಗೆ ಮರಳಿದ್ದರಿಂದ ಕೋವಿಡ್ ಆಸ್ಪತ್ರೆ ಖಾಲಿಯಾಗಿದೆ. ಜಿಲ್ಲೆಯ 6 ಮಂದಿ ಸೋಂಕಿತರು ಹೋ ಐಸೊಲೇಷನ್‌ನಲ್ಲಿದ್ದಾರೆ.

ಮಂಗಳವಾರ 549 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, ಎಲ್ಲಾ ವರದಿಗಳು ನೆಗಟಿವ್‌ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 32,560 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಈ ಪೈಕಿ 32,015 ಮಂದಿ ಗುಣಮುಖರಾಗಿದ್ದಾರೆ.

ಕೇರಳ ಮತ್ತು ತಮಿಳುನಾಡಿನಲ್ಲಿ ಕಂಡಿದ್ದ ಕೊರೊನಾ ಏರುಗತಿ ಜಿಲ್ಲೆಗೆ ಆತಂಕಕಾರಿಯಾಗಿ ಪರಿಣಮಿಸಿತ್ತು. ಸದ್ಯ, ಈಗ ಕೊರೊನಾತಂಕ ದೂರವಾಗಿದೆ. ನಿರ್ಲಕ್ಷ್ಯ ವಹಿಸದೇ ಮುನ್ನೆಚ್ಚರಿಕೆ ವಹಿಸಿದಾಗ ಮಾತ್ರ ಈ ಸಡಗರ ಮುಂದುವರೆಯಲು ಸಾಧ್ಯ ಎಂಬುದು ವೈದ್ಯರ ಮಾತಾಗಿದೆ.

ABOUT THE AUTHOR

...view details