ಚಾಮರಾಜನಗರ: ಯಾವುದೇ ಕಾರಣಕ್ಕೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ಮೂರು ವರ್ಷ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಸವದಿ ಅಭಿಮಾನಿಗಳು ಪಾರ್ಟಿಯಲ್ಲ, ಸಿಎಂ ಬದಲಾವಣೆ ಆಗಲ್ಲ: ನಳಿನ್ ಕುಮಾರ್ ಸ್ಪಷ್ಟನೆ - ಬಿ ಎಸ್ ಯಡಿಯೂರಪ್ಪ
ಕೆಲ ಅಭಿಮಾನಿಗಳು ಲಕ್ಷ್ಮಣ ಸವದಿ ಮುಂದಿನ ಸಿಎಂ ಎಂದಿದ್ದಾರೆ. ಅವರು ಪಕ್ಷವಲ್ಲ, ಅವರು ಹೇಳುವುದು ಪಕ್ಷದ ತೀರ್ಮಾನವಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಸಿಎಂ ಬದಲಾಯಿಸಿ ಎಂದು ಶಾಸಕರು, ಮಂತ್ರಿಗಳು ಯಾರೂ ಕೇಳಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲ ಅಭಿಮಾನಿಗಳು ಸವದಿ ಮುಂದಿನ ಸಿಎಂ ಎಂದಿದ್ದಾರೆ. ಅವರು ಪಕ್ಷವಲ್ಲ, ಅವರು ಹೇಳುವುದು ಪಕ್ಷದ ತೀರ್ಮಾನವಲ್ಲ. ಸವದಿ ಇಲಾಖೆ ಬಗೆಗಿನ ಚರ್ಚೆಗಾಗಿ ಗಡ್ಕರಿ ಭೇಟಿ ಮಾಡಿದ್ದಾರೆ ಅಷ್ಟೇ. ಆದ್ರೆ ಸರ್ಕಾರದಲ್ಲಿ ಯಾವುದೇ ರೀತಿಯ ಅಪಸ್ವರವಿಲ್ಲ ಎಂದರು.
ಕೋವಿಡ್ ಪರಿಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರು ಸೇವಾ ಹಿ ಸಂಘಟನ್ ಮೂಲಕ ಜನರ ಕಷ್ಟಕ್ಕೆ ನೆರವಾಗಿದ್ದಾರೆ. ಸಂಕಷ್ಟದಲ್ಲಿದ್ದವರಿಗೆ ಆಹಾರ, ಔಷಧ, ಆಸ್ಪತ್ರೆ ವೆಚ್ಚ, ಆ್ಯಂಬುಲೆನ್ಸ್ ಸೇವೆ ಒದಗಿಸಿದ್ದಾರೆ. ಅಗತ್ಯಬಿದ್ದರೆ ಗೌರವಯುತ ಅಂತ್ಯಸಂಸ್ಕಾರದಲ್ಲೂ ತೊಡಗಿಸಿಕೊಳ್ಳಲಿದ್ದಾರೆ ಎಂದು ಕಟಿಲ್ ಹೇಳಿದರು.