ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದಲ್ಲಿ ಪೇದೆಯ ಪತ್ನಿ ನೇಣಿಗೆ ಶರಣು: ಕಾರಣ ನಿಗೂಢ - The wife of police man dead news

ಕೊಳ್ಳೇಗಾಲದ ಪೊಲೀಸ್ ಪೇದೆಯ ಪತ್ನಿ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿರುವ ಘಟನೆ ಜರುಗಿದ್ದು, ತನಿಖೆ ಮುಂದುವರೆದಿದೆ.

ಪೇದೆಯ ಪತ್ನಿ ನೇಣಿಗೆ ಶರಣು
ಪೇದೆಯ ಪತ್ನಿ ನೇಣಿಗೆ ಶರಣು

By

Published : May 16, 2020, 9:42 PM IST

ಕೊಳ್ಳೇಗಾಲ (ಚಾಮರಾಜನಗರ) :ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯ ಪೇದೆ ಪರುಶುರಾಮ್ ಎಂಬುವವರ ಪತ್ನಿ ನಾಗರತ್ನ (19) ಸಾವನ್ನಪ್ಪಿದ್ದಾರೆ.

ಪರಶುರಾಮ್ ಮೂಲತಃ ರಾಯಚೂರಿನವರಾಗಿದ್ದು, ಕಳೆದ 3 - 4 ವರ್ಷಗಳಿಂದ ಪೊಲೀಸ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ಜಿಲ್ಲೆಯ ತನ್ನ ಸಂಬಂಧಿಕರಾದ ನಾಗರತ್ನ ಅವರನ್ನು ಒಂದು ವರ್ಷದ‌ ಹಿಂದೆ ಮದುವೆಯಾಗಿ ಇಲ್ಲಿನ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.

ಎಂದಿನಂತೆ ಕರ್ತವಕ್ಕೆ ತೆರಳಿ ಮಧ್ಯಾಹ್ನ ಊಟದ ಸಮಯದಲ್ಲಿ ಮನೆಗೆೆ ಹಿಂತಿರುಗಿದಾಗ ಮನೆಯ ಬಾಗಿಲು ತೆರೆಯದಿರುವುದನ್ನು ಕಂಡು ಪೇದೆ ಪರಶುರಾಮ್​ ಗಾಬರಿಯಾಗಿದ್ದಾರೆ. ಬಳಿಕ ಬಾಗಿಲು ಒಡೆದು ನೋಡಿದಾಗ ನಾಗರತ್ನ ನೇಣಿಗೆ ಶರಣಾಗಿದ್ದಾಳೆ.

ಶವವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ನಾಗರತ್ನ ಪೋಷಕರು ರಾಯಚೂರು ಜಿಲ್ಲೆಯಿಂದ ಆಗಮಿಸಿದ ಬಳಿಕ ದೂರು ಪಡೆದು ಮುಂದಿನ ಕ್ರಮ ಕೈಗೊಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details