ಕರ್ನಾಟಕ

karnataka

ETV Bharat / state

ಚಾಮರಾಜನಗರ ದುರಂತ.. ಯುಎಸ್, ಬಾಂಗ್ಲಾ, ಅರಬ್ ಪತ್ರಿಕೆಗಳಲ್ಲಿ ವರದಿಯಾಗಿ ಅಪಖ್ಯಾತಿ..

ಈ ಹಿಂದೆ ಜಿಲ್ಲೆಯ ಅಭಯಾರಣ್ಯ, ಜನಪದ, ಸೋಲಿಗರ ಗಿರಿಜನರ ಸಂಸ್ಕೃತಿ- ಸಂಪ್ರದಾಯ, ಆನೆ ಮತ್ತು ಹುಲಿ ಸಂತತಿ ಕುರಿತು ವಿದೇಶಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿ ಜಿಲ್ಲೆಗೆ ಗರಿ ಮೂಡಿದ್ದವು..

corona
corona

By

Published : May 3, 2021, 5:56 PM IST

ಚಾಮರಾಜನಗರ :ಕೊರೊನಾ ಮೊದಲನೇ ಅಲೆಯಲ್ಲಿ ಬರೋಬ್ಬರಿ 3 ತಿಂಗಳು ಕೊರೊನಾ ಸೋಂಕಿಲ್ಲದೆ ದೇಶದ ಗಮನ ಸೆಳೆದಿದ್ದ ಚಾಮರಾಜನಗರ ಈಗ ಎರಡನೇ ಅಲೆಯಲ್ಲಿ ಆ್ಯಕ್ಸಿಜನ್ ಕೊರತೆ ದುರಂತದಿಂದ ವಿದೇಶಿ ಪತ್ರಿಕೆಗಳಲ್ಲೂ ವರದಿಯಾಗಿ ಅಪಖ್ಯಾತಿ ಗಳಿಸಿದೆ‌.

ರಾಜ್ಯ-ರಾಷ್ಟ್ರದಲ್ಲಷ್ಟೆಅಲ್ಲದೇ ವಿದೇಶಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಆಕ್ಸಿಜನ್ ದುರಂತ ಪ್ರಕರಣ ವರದಿಯಾಗಿದೆ. ಕಳೆದ 24 ತಾಸುಗಳಲ್ಲಿ 24 ಕೊರೊನಾ ಸೋಂಕಿತರು ಆಮ್ಲಜನಕ ಕೊರತೆಯಿಂದ ಅಸುನೀಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಎಂದು ಕರ್ನಾಟಕ, ನವದೆಹಲಿ ಡೇಟ್​ಲೈನ್​ಗಳಲ್ಲಿ ವರದಿ ಬಿತ್ತರಿಸಿ ಭಾರತದಲ್ಲಿ ಕೊರೊನಾ ಮಹಾಮಾರಿ ಭೀಕರತೆ ಸೃಷ್ಟಿಸಿದೆ ಎಂದು ಆತಂಕ ಹೊರ ಹಾಕಿವೆ.‌

ಅಮೆರಿಕಾದ ಇಂಟರ್​ನ್ಯಾಷನಲ್​ ಬ್ಯುಸಿನೆಸ್ ಟೈಮ್ಸ್​, ಬ್ಯುಸಿನೆಸ್ ಇನ್‌ಸೈಡರ್, ಟರ್ಕಿಯ ಇಸ್ತಾಂಬುಲ್​ನಿಂದ ಪ್ರಕಟವಾಗುವ ಡೈಲೀ ಸಭಾ, ಬಾಂಗ್ಲಾದೇಶದ ಢಾಕಾ ಟ್ರಿಬ್ಯೂನ್​, ದಿ ಡೈಲಿ ಸ್ಟಾರ್​ ಹಾಗೂ ದುಬೈನಿಂದ ಪ್ರಕಟಗೊಳ್ಳುವ ಖಲೇಜಾ ಟೈಮ್ಸ್​ ಪತ್ರಿಕೆಗಳಲ್ಲಿ ದುರಂತದ ವರದಿ ಪ್ರಕಟವಾಗಿದೆ.

ಈ ಹಿಂದೆ ಜಿಲ್ಲೆಯ ಅಭಯಾರಣ್ಯ, ಜನಪದ, ಸೋಲಿಗರ ಗಿರಿಜನರ ಸಂಸ್ಕೃತಿ- ಸಂಪ್ರದಾಯ, ಆನೆ ಮತ್ತು ಹುಲಿ ಸಂತತಿ ಕುರಿತು ವಿದೇಶಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿ ಜಿಲ್ಲೆಗೆ ಗರಿ ಮೂಡಿದ್ದವು.

ಕಳೆದ ಬಾರಿ ಕೊರೊನಾ ಕಟ್ಟೆಚ್ಚರದ ವರದಿಗಳು ಬಿತ್ತರಗೊಂಡು ಹೆಮ್ಮೆ ಮೂಡಿಸಿತ್ತು. ಆದರೆ, ಆಡಳಿತ ಯಂತ್ರದ ಅವ್ಯವಸ್ಥೆಯಿಂದ ಬಲಿಯಾದ ಘಟನೆ ಬಿತ್ತರಗೊಂಡು ಜಿಲ್ಲೆ ಅಪಖ್ಯಾತಿ ಗಳಿಸಿದೆ.

ಇದನ್ನೂ ಓದಿ:ಚಾಮರಾಜನಗರದಲ್ಲಿ ಭೀಕರ ದುರಂತ: 24 ಗಂಟೆ.. 24 ಸಾವು, ಆಕ್ಸಿಜನ್‌ ಸಿಗದೇ 12 ಮಂದಿ ಕೊನೆಯುಸಿರು

ABOUT THE AUTHOR

...view details