ಚಾಮರಾಜನಗರ :ಬಿಜೆಪಿ ಜನಸೇವಕ ಸಮಾವೇಶಕ್ಕಾಗಿ ಪೊಲೀಸರು ರಸ್ತೆಯನ್ನೇ ಬಂದ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಅಂಬೇಡ್ಕರ್ ಭವನ ಸಮೀಪದ ಮೈದಾನದಲ್ಲಿ ಇಂದು ಬಿಜೆಪಿಯ ಜನಸೇವಕ ಸಮಾವೇಶ ನಡೆಯುತ್ತಿದ್ದು, ಸಚಿವರಾದ ಆರ್.ಅಶೋಕ್ ಮತ್ತು ಸುರೇಶ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸಲಿರುವುದರಿಂದ ಕೋರ್ಟ್ನಿಂದ ಸತ್ತಿ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಸ್ತೆಯನ್ನೇ ಪೊಲೀಸರು ಬಂದ್ ಮಾಡಿದ್ದಾರೆ.