ಕರ್ನಾಟಕ

karnataka

ETV Bharat / state

4 ನಾಯಿಗಳನ್ನು ತಿಂದು ತೇಗಿದ್ದ ಚಿರತೆ‌.. ಶ್ವಾನದ ಆಸೆಗೆ ಬಂದು ಬಿತ್ತು ಬೋನಿಗೆ.. - ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ನಾಯಿಯನ್ನು ಬೇಟೆಯಾಡಲು ಬಂದಿದ್ದ ಆರು ವರ್ಷದ ಚಿರತೆಯೊಂದು ನಾಯಿಯ ಬೋನಿನಲ್ಲಿ ಸೆರೆಯಾಗಿದೆ. ಕಳೆದ ತಿಂಗಳು ಕೂಡ ಇದೇ ಸ್ಥಳದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿತ್ತು..

The leopard that fell on the dog's cage
ಶ್ವಾನದ ಬೋನಿಗೆ ಬಿದ್ದ ಚಿರತೆ

By

Published : May 31, 2022, 5:29 PM IST

ಚಾಮರಾಜನಗರ :ನಾಲ್ಕು ನಾಯಿಗಳು ಹಾಗೂ ಒಂದು ಕರು ತಿಂದು ತೇಗಿದ್ದ ಚಿರತೆ ಶ್ವಾನದ ಆಸೆಗೆ ಬಂದು ಕೊನೆಗೂ ಬೋನಿನಲ್ಲಿ ಸೆರೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗುಡಿಹಟ್ಟಿ ಉದಯ್ ಕುಮಾರ್ ಎಂಬುವರ ಜಮೀನಿನಲ್ಲಿ ನಾಯಿ ಕಟ್ಟಿ ಇರಿಸಲಾಗಿದ್ದ ಬೋನಿಗೆ ಅಂದಾಜು 6 ವರ್ಷದ ಗಂಡು ಚಿರತೆವೊಂದು ಇಂದು ಬಿದ್ದಿದೆ.

ಶ್ವಾನದ ಬೋನಿಗೆ ಬಿದ್ದ ಚಿರತೆ..

ಕಳೆದ ಒಂದು ತಿಂಗಳ ಹಿಂದೆಯೂ ಇದೇ ಸ್ಥಳದಲ್ಲಿಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಈಗ ಮತ್ತೊಂದು ಬಿದ್ದಿದೆ. ಬಂಧಿಯಾಗಿರುವ ಚಿರತೆ 4 ನಾಯಿಗಳು ಹಾಗೂ ಒಂದು ಕರುವನ್ನು ಕೊಂದಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್​ನಲ್ಲಿ ಈ ಘಟನೆ ನಡೆದಿದೆ. ಕೋರ್ ಜೋನ್​ಗೆ ಸೆರೆಯಾದ ಚಿರತೆಯನ್ನು ಬಿಡಲಾಗಿದೆ.

ಇದನ್ನೂ ಓದಿ :ಬಾಲಕಿ ಮೇಲೆ ಚಿರತೆ ದಾಳಿ: ದೊಣ್ಣೆಯಿಂದ ಹೊಡೆದು ಚಿರತೆ ಓಡಿಸಿದ ತಾಯಿ

ABOUT THE AUTHOR

...view details