ಚಾಮರಾಜನಗರ: ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಹೊಡೆದು ಕೊಂದ ಘಟನೆ ಹನೂರು ತಾಲೂಕಿನ ಹುತ್ತೂರಿನಲ್ಲಿ ನಡೆದಿದೆ.
ಕುಡಿಯಲು ಹಣ ಕೊಡಲಿಲ್ಲ ಅಂತಾ ಪತ್ನಿಯನ್ನೇ ಕೊಂದ ಪತಿ! - ಪತಿ ಪತ್ನಿ
ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಹೊಡೆದು ಕೊಂದು ಬಳಿಕ ಶವವನ್ನು ಖಾಸಗಿ ಜಮೀನಿನಲ್ಲಿ ಬಿಸಾಡಿದ್ದ ಪತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
husband killed his wife
ಗ್ರಾಮದ ನಾಗ ಎಂಬಾತ ಪತ್ನಿ ಅರಸಮ್ಮಳನ್ನು ಕೊಂದ ಆರೋಪಿ. ಈತ ಕುಡಿಯಲು ಹಣ ಕೇಳಿದಾಗ ಕೊಡದಿದ್ದಕ್ಕೆ ಹೆಂಡತಿಯ ಕಪಾಳಕ್ಕೆ ಹೊಡೆದು ಕೊಂದು ಬಳಿಕ ಶವವನ್ನು ಖಾಸಗಿ ಜಮೀನಿನಲ್ಲಿ ಬಿಸಾಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಮೃತಳ ಸಹೋದರ ನೀಡಿದ ದೂರು ಆಧರಿಸಿ ಪತಿ ನಾಗನನ್ನು ಹನೂರು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.