ಚಾಮರಾಜನಗರ: ಪ್ರತಿಕೂಲ ಹವಾಮಾನದಿಂದಾಗಿ ಕೊಚ್ಚಿಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ವೊಂದು ಚಾಮರಾಜನಗರ ಗಡಿಭಾಗವಾದ ಸತ್ಯಮಂಗಲಂನ ಕಡಂಬೂರ್ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಸಿಎಸ್ ಏವಿಯೇಷನ್ ಎಂಬ ಕಂಪನಿಗೆ ಸೇರಿದ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿನ ಭರತ್, ಶೀಲಾ ಭರತ್, ಹೆಲಿಕಾಪ್ಟರ್ ಇಂಜಿನಿಯರ್ ಅಂಕಿತ್ ಸಿಂಗ್, ಪೈಲಟ್- ಜಸ್ಪಾಲ್ ಎಂಬವರಿದ್ದರು. ಬೆಂಗಳೂರಿನಿಂದ ಕೊಚ್ಚಿ ಆಸ್ಪತ್ರೆಯೊಂದಕ್ಕೆ ತೆರಳುವಾಗ ಪ್ರತಿಕೂಲ ಹವಾಮಾನದಿಂದಾಗಿ ಕಡಂಬೂರಿನ ಜಮೀನೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ.