ಚಾಮರಾಜನಗರ :ದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾದ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿಯ ಸಿಆರ್ಪಿಎಫ್ ಯೋಧ ಶಿವಕುಮಾರ್ (31) ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಜಮೀನಿನಲ್ಲಿ ನಡೆಯಿತು.
ಬೆಳಗ್ಗೆ 7 ಗಂಟೆಯ ಹೊತ್ತಿಗೆ ಸೇನಾ ವಾಹನದಲ್ಲಿ ಗ್ರಾಮಕ್ಕಾಗಮಿಸಿದ ಪಾರ್ಥಿವ ಶರೀರವನ್ನು, ನೂರಾರು ಜನರು ಕಂಬನಿಗರೆದು ಬರಮಾಡಿಕೊಂಡರು. ಚಾಮರಾಜನಗರ ಎಸ್ಪಿ, ಡಿವೈಸ್ಪಿ, ತಾಲೂಕು ಆಡಳಿತದ ಅಧಿಕಾರಿಗಳ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು. ನಂತರ ರಾಷ್ಟ್ರಗೀತೆ ಮೊಳಗಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.