ಕರ್ನಾಟಕ

karnataka

ETV Bharat / state

ಕಾಡೊಳಗೊಂದು ಕ್ರೀಡಾಲೋಕ: ದಸರಾ ಮರೆತು ಆಟ ಆಡುತ್ತಿರುವ ಬಂಡೀಪುರ ಆನೆಗಳು...!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಐನೋರು ಮಾರಿಗುಡಿ ವಲಯದಲ್ಲಿರುವ ರಾಂಪುರ ಆನೆ ಶಿಬಿರದ ಗಜಪಡೆ ಪುಟ್ಬಾಲ್ ಆಡುತ್ತವೆ, ಒಂಟಿ ಕಾಲಲ್ಲಿ ನಿಂತುಕೊಳ್ಳುತ್ತವೆ, ಘೀಳಿಟ್ಟು ನಮಸ್ಕಾರ ಮಾಡುವುದರಲ್ಲಿ ಬ್ಯುಸಿಯಾಗಿ ದಸರಾ ತಪ್ಪಿಸಿಕೊಂಡ ನಿರಾಶೆ ಮರೆಯುತ್ತಿವೆ.

Chamarajanagar
ಗಜಪಡೆ

By

Published : Oct 19, 2020, 6:36 PM IST

ಚಾಮರಾಜನಗರ: ದ್ರಾಕ್ಷಿ, ಗೋಡಂಬಿ, ಕಬ್ಬು ಆಹಾ ಎನ್ನುವ ದಸರಾ ಊಟ ಮಿಸ್ ಮಾಡಿಕೊಂಡಿರುವ ಬಂಡೀಪುರ ಆನೆಗಳು ಬೇಸರದಲ್ಲಿವೆ ಎಂದುಕೊಂಡರೇ ತಪ್ಪಾಗಲಿದೆ. ಏಕೆಂದರೆ, ಬೊಂಬಾಟ್ ಆಟಗಳನ್ನು ಕಲಿತುಕೊಂಡು ಕ್ರೀಡಾಲೋಕವನ್ನೇ ಸೃಷ್ಟಿಸಿವೆ.

ಆಟ ಆಡುತ್ತಿರುವ ಬಂಡೀಪುರ ಆನೆಗಳು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಐನೋರು ಮಾರಿಗುಡಿ ವಲಯದಲ್ಲಿರುವ ರಾಂಪುರ ಆನೆ ಶಿಬಿರದ ಗಜಪಡೆ ಪುಟ್ಬಾಲ್ ಆಡುತ್ತವೆ, ಒಂಟಿ ಕಾಲಲ್ಲಿ ನಿಂತುಕೊಳ್ಳುತ್ತವೆ, ಘೀಳಿಟ್ಟು ನಮಸ್ಕಾರ ಮಾಡುವುದರಲ್ಲಿ ಬ್ಯುಸಿಯಾಗಿ ದಸರಾ ತಪ್ಪಿಸಿಕೊಂಡ ನಿರಾಶೆ ಮರೆಯುತ್ತಿವೆ. ಮಾವುತರ ಆಜ್ಞೆಗಳನ್ನು ಕೇಳಲು, ಪಟಾಕಿ ಸೇರಿದಂತೆ ಬೇರೆ ಶಬ್ಧಗಳಿಗೆ ಹೆದರದಂತಿರಲು, ಕಾರ್ಯಾಚರಣೆಗೆ ತೆರಳಿದ ವೇಳೆ ಮಾವುತ ಸ್ನೇಹಿಯಾಗಿ ವರ್ತಿಸುವ ಉದ್ದೇಶದಿಂದ ಕಳೆದ‌ ಜುಲೈನಿಂದ ದೈಹಿಕ ಕಸರತ್ತುಗಳನ್ನು ಅರಣ್ಯ ಇಲಾಖೆ ಮಾಡಿಸುತ್ತಿದೆ.

ನಿತ್ಯ 2-3 ತಾಸು ಆರ್.ಎಫ್.ಒ ಷಣ್ಮುಖ ನೇತೃತ್ವದಲ್ಲಿ ಆನೆಗಳಿಗೆ ದೈಹಿಕ ಕಸರತ್ತನ್ನು ಹೇಳಿ ಕೊಡಲಾಗುತ್ತಿದೆ.

ಶಿಬಿರದಲ್ಲಿ ದಸರಾದಲ್ಲಿ ಪಾಲ್ಗೊಂಡ ಜಯಪ್ರಕಾಶ್, ಚೈತ್ರ, ಲಕ್ಷ್ಮೀ ಸೇರಿದಂತೆ ಕೃಷ್ಣ, ರೋಹಿತ್, ಗಣೇಶ, ಪಾರ್ಥಸಾರಥಿ, ಭಾಸ್ಕರ, ನಿಸರ್ಗ, ಐಶ್ವರ್ಯ, ಮಾರಿಷ, ಭೃಗು ಹಾಗೂ ಕಪಿಲಾ ಎಂಬ 13 ಆನೆಗಳಿದ್ದು, ನಿತ್ಯ 2-3 ತಾಸು ಆರ್.ಎಫ್.ಒ ಷಣ್ಮುಖ ನೇತೃತ್ವದಲ್ಲಿ ದೈಹಿಕ ಕಸರತ್ತನ್ನು ಹೇಳಿ ಕೊಡಲಾಗುತ್ತಿದೆ.

ಮಾತು ಕೇಳಲು ಆಟ:ಹುಲಿ ಕಾರ್ಯಾಚರಣೆ, ಪುಂಡಾನೆ ಸೆರೆ ಸೇರಿದಂತೆ ಇನ್ನಿತರ ಕಾರ್ಯಾಚರಣೆಯಲ್ಲಿ ಗಜಪಡೆಯನ್ನು ಅಣಿಗೊಳಿಸಲು ಈ ದೈಹಿಕ ಕಸರತ್ತಗಳನ್ನು ಹೇಳಿಕೊಡಲಾಗುತ್ತಿದೆ.‌ ಮಾವುತ ಹತ್ತಲು ಸೊಂಡಿಲ‌ ಸಹಾಯ ನೀಡುವುದು, ನಿಲ್ಲು-ಓಡು- ಮುಂತಾದ ಆಜ್ಞೆಗಳನ್ನು ಪಾಲಿಸುವ ಅಭ್ಯಾಸಕ್ಕಾಗಿ ಪುಟ್ಬಾಲ್, ಮರದ ದಿಮ್ಮಿಗಳನ್ನು ಎತ್ತುವುದು,‌ ಘೀಳಿಡುವುದು, ಸೊಂಡಿಲು ಚಾಚಿಸುವುದು, ಮರದ ದಿಮ್ಮಿ ಮೇಲೆ ನಿಲ್ಲುವುದು, ಎರಡು ಕಾಲಲ್ಲಿ ನಡೆಯುವುದು, ಸುತ್ತು ಹಾಕಿಸುವುದು ಹೀಗೆ ಕ್ರೀಡಾಲೋಕವನ್ನೇ ಕಾಡೊಳಗೆ ಸೃಷ್ಟಿಸಲಾಗಿದೆ.

ಮತ್ತೊಂದು ವಿಚಾರ ಏನೆಂದರೆ ದೈಹಿಕ ಕಸರತ್ತುಗಳ ಅಭ್ಯಾಸದ ಫಲವಾಗಿ ಆನೆಗಳು ಮಾವುತರ ಸಂಬಂಧ ಮತ್ತಷ್ಟು ಹತ್ತಿರವಾಗಿದ್ದು ಥಟ್ಟನೆ ಮಾವುತನ ಮಾತನ್ನು ಅರ್ಥ ಮಾಡಿಕೊಳ್ಳುತ್ತಿವೆ. ಆನೆಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವಾಗ ಲಾರಿ ಹತ್ತಿಸಲು ಪಡುತ್ತಿದ್ದ ಪಡಿಪಾಟಲು ಗೌಣ ಆಗಲಿದೆ ಎಂಬ‌ ವಿಶ್ವಾಸ ಮಾವುತ- ಕಾವಾಡಿಗಳದ್ದಾಗಿದೆ.

ABOUT THE AUTHOR

...view details