ಚಾಮರಾಜನಗರ: ಸಂಬಂಧಿಕರಿಗೆ ವಿವಾಹ ಆಹ್ವಾನ ಪತ್ರಿಕೆ ಕೊಡಲು ಬಂದ ಕುಟುಂಬವೊಂದು ಕಾರು ಕಳೆದುಕೊಂಡ ಘಟನೆ ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ವಿವಾಹ ಆಹ್ವಾನ ಪತ್ರಿಕೆ ಕೊಡಲು ಬಂದು ಕಾರು ಕಳೆದುಕೊಂಡ ಕುಟುಂಬ! - ವಿವಾಹ ಆಹ್ವಾನ ಪತ್ರಿಕೆ ಕೊಡಲು ಬಂದು ಕಾರು ಕಳೆದುಕೊಂಡ ಕುಟುಂಬ
ಅಕ್ಕನ ಮದುವೆಗೆ ಸಂಬಂಧಿಕರನ್ನು ಆಹ್ವಾನಿಸಲು ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮಕ್ಕೆ ಬಂದಿದ್ದವರ ಕಾರನ್ನು ಯಾರೋ ಖದೀಮರು ಎಗರಿಸಿದ್ದಾರೆ.
ತಮಿಳುನಾಡಿನ ಕೊಯಂಬತ್ತೂರು ನಿವಾಸಿ ವೆಂಕಟೇಶ್ ಕೀರ್ತಿ ಎಂಬುವರು ಕಾರು ಕಳೆದುಕೊಂಡವರು. ಅಕ್ಕನ ಮದುವೆಗೆ ಸಂಬಂಧಿಕರನ್ನು ಆಹ್ವಾನಿಸಲು ಸ್ನೇಹಿತರೊಬ್ಬರಿಂದ ಸ್ವಿಪ್ಟ್ ಕಾರನ್ನು ಪಡೆದು ತಂದಿದ್ದರು ಎಂದು ತಿಳಿದು ಬಂದಿದೆ.
ಶನಿವಾರ ರಾತ್ರಿ ಬಂದ ಕುಟುಂಬ ವಿವಾಹ ಆಹ್ವಾನ ಪತ್ರಿಕೆ ಹಂಚಿ ರಾತ್ರಿ ಅಜ್ಜಿ ಮನೆ ಮುಂಭಾಗವೇ ನಿಲ್ಲಿಸಿದ್ದರಂತೆ. ಆದರೆ ಭಾನುವಾರ ಬೆಳಗ್ಗೆ ಬಾಗಿಲು ತೆರೆದು ನೋಡಿದಾಗ ಕಾರು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಯಳಂದೂರು ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಅದರ ಸುಳಿವು ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.