ಚಾಮರಾಜನಗರ:ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದ ಉದ್ಘಾಟನೆಗೆ ಕರೆಯದೇ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಜಿಪಂ ಸದಸ್ಯರು ಜಿಪಂ ಸಿಇಒ ಮತ್ತು ಕೆಆರ್ ಡಿಐಎಲ್ ಅಧಿಕಾರಿ ಸುಂದರ ಮೂರ್ತಿ ವಿರುದ್ಧ ಪ್ರತಿಭಟನೆ ನಡೆಸಿದರು.
ಕೆಡಿಪಿ ಸಭೆ ಮುಗಿಸಿ ಸಚಿವರು ಹೊರ ನಡೆಯುತ್ತಿದ್ದಂತೆ ಸದಸ್ಯರಿಗೆ ಯವುದೇ ಮಾಹಿತಿ ನೀಡದೇ ಕಟ್ಟಡ ಉದ್ಘಾಟಿಸಿದ್ದಾರೆ. ಜನಪ್ರತಿನಿಧಿಗಳನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಪಂ ಸಿಇಒ ವಿರುದ್ಧ ಸದಸ್ಯರ ಆಕ್ರೋಶ ಜಿಪಂ ಸಿಇಒ ಬಿ.ಹೆಚ್.ನಾರಾಯಣರಾವ್ ಹಾಗೂ ಅಧಿಕಾರಿ ಸುಂದರ ಮೂರ್ತಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದೇ ವೇಳೆ, ಸುಂದರ ಮೂರ್ತಿ ಅವರನ್ನು ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದು ಆಕ್ರೋಶ ಹೊರಹಾಕಿದರು.
ಡಿಸಿ ಬಿ.ಬಿ.ಕಾವೇರಿ, ಜಿಪಂ ಸದಸ್ಯರ ಮನವೊಲಿಸಿ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಸಂಧಾನ ನಡೆಸಿದ ಬಳಿಕ ಜಿಪಂ ಸದಸ್ಯರು ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಒತ್ತಾಯಿಸಿದರು.