ಚಾಮರಾಜನಗರ:ವಿದ್ಯಾಗಮ ಮುಗಿಸಿ ಸ್ನೇಹಿತರೊಡಗೂಡಿ ಈಜಲು ತೆರಳಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಕೃಷ್ಣಪುರ ಕೆರೆಯಲ್ಲಿ ನಿನ್ನೆ ಸಂಜೆ ನಡೆದಿದೆ.
ಚಾಮರಾಜನಗರ: ವಿದ್ಯಾಗಮ ಮುಗಿಸಿ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು - ಈಜಲು ತೆರಳಿದ್ದ ವಿದ್ಯಾರ್ಥಿ ಸಾವು
ವಿದ್ಯಾಗಮ ಮುಗಿಸಿ ಸ್ನೇಹಿತರೊಡಗೂಡಿ ಈಜಲು ತೆರಳಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಪಾಂಡು (15) ಮೃತಪಟ್ಟಿದ್ದಾನೆ.
ಚಾಮರಾಜನಗರ: ವಿದ್ಯಾಗಮ ಮುಗಿಸಿ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು
ಹೊನ್ನೂರು ಗ್ರಾಮದ ಶಿವಣ್ಣ ಎಂಬುವವರ ಮಗ ಪಾಂಡು (15) ಮೃತ ವಿದ್ಯಾರ್ಥಿ. ವಿದ್ಯಾಗಮ ಮುಗಿಸಿಕೊಂಡು ಸ್ನೇಹಿತರ ಜೊತೆ ಈಜಲು ತೆರಳಿದ್ದ ವೇಳೆ ಕೆರೆಯ ಆಳಕ್ಕಿಳಿದು ಮೇಲೆ ಬರಲಾರದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತನ ಜೊತೆಗೆ ತೆರಳಿದ್ದ ಗೆಳೆಯರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.