ಕರ್ನಾಟಕ

karnataka

ETV Bharat / state

ಮೈದುಂಬಿದ ಸುವರ್ಣಾವತಿ-ಚಿಕ್ಕಹೊಳೆ ಡ್ಯಾಂ.. ವರ ಕೊಟ್ಟನೇ ನೀರುಗಂಟಿ ರೆಹಮಾನ್ ಸ್ಥಾಪಿಸಿದ್ದ ಗಣಪ!? - latest chamarajanagara reservoirs news

ದಿಂಬಂ ಭಾಗದಲ್ಲಿ ಉತ್ತಮ ಮಳೆ ಮುಂದುವರೆದರೆ ಕೆಲವು ದಿನಗಳಲ್ಲೇ ಎರಡೂ ಜಲಾಶಯಗಳು ತುಂಬಲಿದ್ದು ನೇಂದ್ರ ಬಾಳೆ, ಅರಿಶಿಣ, ತೆಂಗು, ಈರುಳ್ಳಿ, ಅಡಿಕೆ ಸೇರಿದಂತೆ ಇತರೆ ಬೆಳೆಗಳಿಗೆ ಸಾಕಷ್ಟು ನೀರು ಒದಗಲಿದೆ‌.

ಮೈದುಂಬಿದ ಸುವರ್ಣಾವತಿ-ಚಿಕ್ಕಹೊಳೆ ಜಲಾಶಯ‌... ವರ ಕೊಟ್ಟನೇ ನೀರುಗಂಟಿ ರೆಹಮಾನ್ ಸ್ಥಾಪಿಸಿದ್ದ ಗಣಪ !?

By

Published : Nov 23, 2019, 1:22 PM IST

ಚಾಮರಾಜನಗರ:ಅವಳಿ ಜಲಾಶಯಗಳೆಂದೇ ಕರೆಯುವ ಚಿಕ್ಕಹೊಳೆ ಮತ್ತು ಸುವರ್ಣಾವತಿ ಜಲಾಶಯಗಳು ತುಂಬುವ ಹಂತ ತಲುಪಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ.

ಮೈದುಂಬಿದ ಸುವರ್ಣಾವತಿ-ಚಿಕ್ಕಹೊಳೆ ಜಲಾಶಯ‌.. ವರ ಕೊಟ್ಟನೇ ನೀರುಗಂಟಿ ರೆಹಮಾನ್ ಸ್ಥಾಪಿಸಿದ್ದ ಗಣಪ !?

ದಿಂಬಂ ಭಾಗದಲ್ಲಿ ಉತ್ತಮ ಮಳೆ ಮುಂದುವರೆದರೆ ಕೆಲವು ದಿನಗಳಲ್ಲೇ ಎರಡೂ ಜಲಾಶಯಗಳು ತುಂಬಲಿದ್ದು ನೇಂದ್ರ ಬಾಳೆ, ಅರಿಶಿಣ, ತೆಂಗು, ಈರುಳ್ಳಿ, ಅಡಿಕೆ ಸೇರಿದಂತೆ ಇತರೆ ಬೆಳೆಗಳಿಗೆ ಸಾಕಷ್ಟು ನೀರು ಒದಗಲಿದೆ‌. ಸುವರ್ಣಾವತಿ ಜಲಾಶಯ 54 ಅಡಿಗಳಲ್ಲಿ 50 ಅಡಿ ಭರ್ತಿಯಾಗಿದೆ. ಚಿಕ್ಕಹೊಳೆ ಜಲಾಶಯದ 74 ಅಡಿಗಳಲ್ಲಿ 68 ಅಡಿ ನೀರು ತುಂಬಿದೆ. ಇದು 2 ವರ್ಷದ ಬಳಿಕ ತುಂಬುವ ನಿರೀಕ್ಷೆ ಹೆಚ್ಚಾಗಿದೆ.

ಗಣಪನ ವರವಂತೆ!: ಕಳೆದ ವರ್ಷ ಮಳೆ ಬಾರದೆ ಜಲಾಶಯಗಳು ಬತ್ತುವ ಸ್ಥಿತಿ ತಲುಪಿದ್ದಾಗ ಜಲಾಶಯದ ನೀರುಗಂಟಿಯಾಗಿ ಕಾರ್ಯನಿರ್ವಹಿಸುವ ರೆಹಮಾನ್ ಚಿಕ್ಕಹೊಳೆ ಜಲಾಶಯದ ಆವರಣದಲ್ಲಿ ಗಣಪನಿಗೆ ಗುಡಿ ಕಟ್ಟಿಸಿ ಶಾಸ್ತ್ರಬದ್ಧವಾಗಿ ಮೂರ್ತಿ ಪ್ರತಿಷ್ಠಾಪಿಸಿ 48 ದಿನ ಪೂಜೆ ಮಾಡಿಸಿದ್ದರಂತೆ. ಕಾಕತಾಳಿಯವೆಂಬಂತೆ ಈ ಬಾರಿ ಜಲಾಶಯಗಳು ತುಂಬಲು ಕೆಲವೇ ಅಡಿಗಳು ಬಾಕಿಯಿದೆ. ಇದು ಗಣಪನ ಕೃಪೆಯಿಂದ ಜಲಾಶಯ ಮೈದುಂಬಿದೆ ಎಂಬುದು ನೀರುಗಂಟಿ ರೆಹಮಾನ್ ನಂಬಿಕೆ.

ABOUT THE AUTHOR

...view details