ಚಾಮರಾಜನಗರ: ಅಧಿಕಾರಿಗಳೆಂದರೆ ಕಾರಿನಲ್ಲಿ ಬಂದು, ಎಸಿ ಕಚೇರಿಯಲ್ಲಿ ಕೂರುವವರೇ ಹೆಚ್ಚು. ಆದ್ರೆ ಈ ಮಾತಿಗೆ ಅಪವಾದ ಎಂಬಂತಿದ್ದಾರೆ ಇಲ್ಲೋರ್ವ ಸಿಇಒ.
ಹೌದು, ಚಾಮರಾಜನಗರ ಜಿ.ಪಂ. ಸಿಇಒ ಕೆ.ಎಸ್. ಲತಾಕುಮಾರಿ ಸಂತೇಮರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾವುದವಾಡಿ ಗ್ರಾಮದ ಶ್ಯಾಮಬಸವಯ್ಯನ ಕಟ್ಟೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ವೇಳೆ ಶ್ರಮದಾನ ಸ್ವತಃ ಮಾಡಿ ಕಾರ್ಮಿಕರಿಗೆ ಆತ್ಮವಿಶ್ವಾಸ ತುಂಬಿದರು.