ಚಾಮರಾಜನಗರ :ಬ್ರೈನ್ ಟ್ಯೂಮರ್ನಿಂದ ಬಾಲಕನೊಬ್ಬ ಸಾವಿಗೀಡಾಗಿರುವ ಕರುಣಾಜನಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಆ ಹುಡುಗ ಡಾಕ್ಟರ್ ಆಗುವ ಕನಸು ಕಂಡಿದ್ದ... ಆದ್ರೆ ಆ ಮಾರಕ ಕಾಯಿಲೆ ಬದುಕಲು ಬಿಡಲಿಲ್ಲ - kannada news
ಡಾಕ್ಟರ್ ಆಗಬೇಕೆಂದು ಮಹಾದಾಸೆ ಹೊತ್ತಿದ್ದ ಬಾಲಕ, ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದು ತಂದೆ-ತಾಯಿಗಳಿಗೆ ಆಕಾಶ ಕಳಚಿ ಬಿದ್ದಂತಾಗಿದೆ.
ಬ್ರೈನ್ ಟ್ಯೂಮರ್ ಗೆ ಬಾಲಕ ಬಲಿ
ಬೇಗೂರು ಸಮೀಪದ ಹಳ್ಳಿಯೊಂದರ ನಿವಾಸಿ ಪ್ರಕಾಶ್ ಎಂಬವರ ಮಗ ಧನಂಜಯ ಮೃತ ಬಾಲಕ. ಬೇಗೂರಿನ ಲಿಟಲ್ ಫ್ಲವರ್ ಶಾಲೆಯಲ್ಲಿ ಓದುತ್ತಿದ್ದ ಧನಂಜಯ, ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದ. ಡಾಕ್ಟರ್ ಆಗಬೇಕೆಂದು ಮಹಾನ್ ಆಸೆ ಹೊತ್ತಿದ್ದ ಬಾಲಕ ಬ್ರೈನ್ ಟ್ಯೂಮರ್ ಎಂಬ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದು ದುರಂತವೇ ಸರಿ. ಮಗನ ಮೇಲೆ ಬೆಟ್ಟದಷ್ಟು ಆಸೆ ಹೊತ್ತಿದ್ದ ತಂದೆ-ತಾಯಿಯ ಕನಸು ಕಮರಿ ಹೋಗಿದೆ.