ಕೊಳ್ಳೇಗಾಲ (ಚಾಮರಾಜನಗರ): ಇಲ್ಲಿನ ಕಾವೇರಿ ನದಿಯಲ್ಲಿ ಅಪರಿಚಿತ ಶವವೊಂದು ತೇಲಿಬಂದಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ಅಪರಿಚಿತನ ಶವ ಪತ್ತೆ - Kallegala Rural Police Station
ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಲವು ದಿನಗಳ ಹಿಂದೆ ವ್ಯಕ್ತಿ ವೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ಅಪರಿಚಿತನ ಶವ ಪತ್ತೆ
ತಾಲೂಕಿನ ಸರಗೂರು ಗ್ರಾಮದ ಬಳಿಯ ಕಾವೇರಿ ನದಿ ತಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಗುರುತು ಪತ್ತೆಯಾಗಿಲ್ಲ. ಕೊಳೆತ ಸ್ಥಿತಿಯಲ್ಲಿರುವ ಶವದ ಬಲಗೈ ತೋಳಿನ ಮೇಲೆ ಕುದುರೆ ಮುಖದ ಹಚ್ಚೆ ಇದ್ದು, ಹಸಿರು ಬಣ್ಣದ ಟೀ ಶರ್ಟ್ ಧರಿಸಿದ್ದಾನೆ.
ಅಲ್ಲದೇ ಸುಮಾರು 45 ರಿಂದ 50 ವರ್ಷ ಆಸು ಪಾಸಿನ ವ್ಯಕ್ತಿಯಾಗಿದ್ದು, 5.7 ಅಡಿ ಎತ್ತರವಿದ್ದಾರೆ. ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆ ಮರಣೋತ್ತರ ಪರೀಕ್ಷೆ ನಡೆಸಿ ಶವಸಂಸ್ಕಾರ ನೆರವೇರಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.